ದೊಡ್ಡಬಳ್ಳಾಪುರ: ನಗರದ ಇತಿಹಾಸ ಪ್ರಸಿದ್ದ ಗ್ರಾಮ ದೇವತೆ ಶ್ರೀಮುತ್ಯಾಲಮ್ಮದೇವಿ (Muthiyalammadevi) ಜಾತ್ರಾ ಮಹೋತ್ಸವ ಏಪ್ರಿಲ್ 28 ಹಾಗೂ 29 ರಂದು ನಡೆಸಲು ಶುಕ್ರವಾರ ದೇವಾಲಯದ ನಡೆದ ಆಡಳಿತ ಮಂಡಳಿಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಯಿತು.

ನಗರದ ಮುತ್ಯಾಲಮ್ಮ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಪ್ರತಿ ವರ್ಷದಂತೆ ದೇವಾಲಯ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ರಥಗಳ ಆಗಮನ ಹಾಗೂ ಹೂವಿನ ಆರತಿಗಳು ಏಪ್ರಿಲ್ 28 ರಂದು ನಡೆಯಲಿದೆ. ಏಪ್ರಿಲ್ 29 ರಂದು ಹಗಲು ಪರಿಷೆ ನಡೆಯಲಿದೆ.
ಜಾತ್ರೆಯ ದಿನಾಂಕ ನಿಗದಿಗಾಗಿ ನಡೆದ ಸಭೆಯಲ್ಲಿ ಶ್ರೀಮುತ್ಯಾಲಮ್ಮ ಸೇವಾ ಸಮಿತಿ ದತ್ತಿಯ ಅಧ್ಯಕ್ಷ ಎಚ್ ಹನುಮಂತು, ಗೌರವ ಅಧ್ಯಕ್ಷ ಡಿ.ಬಿ.ಹನುಮಂತರಾವ್, ಉಪಾಧ್ಯಕ್ಷ ಕೆ.ನಾಗೇಶ್, ಕಾರ್ಯದರ್ಶಿ ಆರ್.ಪ್ರಭಾಕರ್, ಖಜಾಂಜಿ ಜೆ.ವೈ.ಮಲ್ಲಪ್ಪ, ಕಾರ್ಯಾಧ್ಯಕ್ಷ ಡಿ.ಎನ್.ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ಜೆ.ಕುಮಾರ್, ಅಪ್ಪಿ ವೆಂಕಟೇಶ್, ನಗರಸಭಾ ಸದಸ್ಯ ಟಿ.ಮಂಜುನಾಥ್, ಜಂಟಿ ಕಾರ್ಯದರ್ಶಿ, ಟಿ.ಗೋವಿಂದರಾಜು, ಪ್ರಧಾನ ಅರ್ಚಕರಾದ ಎಚ್.ಅನಂತ ಹಾಗೂ ಟ್ರಸ್ಟಿಗಳು, ದೇವಾಲಯದ ಜಾತ್ರೆಯಲ್ಲಿ ಭಾಗವಹಿಸುವ ಏಳು ಹಳ್ಳಿಗಳ ಗ್ರಾಮಸ್ಥರು,ಶಾಂತಿನಗರ ಸಾಂಸ್ಕೃತಿಕ ಕಲಾಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.