ದೊಡ್ಡಬಳ್ಳಾಪುರ: ತಾಲೂಕಿನ ಹೊಸಹುಡ್ಯ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ಚಿರತೆ (Leopards) ಓಡಾಟ ಕಂಡುಬಂದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಹೊಸಹುಡ್ಯ ಗ್ರಾಮದ ಹರೀಶ್ ಎನ್ನುವವರಿಗೆ ಸೇರಿದ ತೋಟಕ್ಕೆ ನುಗ್ಗಿರುವ ಚಿರತೆ, ತೋಟಕ್ಕೆ ಮೇಯಲೆಂದು ಬಂದಿದ್ದ ಎರಡು ನವಿಲುಗಳನ್ನು ಕೊಂದು ಹಾಕಿದೆ ಎಂದು ವರದಿಯಾಗಿದೆ.
ಇದನ್ನು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಅದರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಚಿರತೆಯ ಹೆಚ್ಚೆಗುರುಗಳು ಹೆಚ್ಚಾಗಿ ಕಂಡುಬಂದಿರುವುದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
LPG ಅಭಾವ.. ಸೀಮೆಎಣ್ಣೆ ವಿತರಿಸಲು ಮೋದಿ ಸರ್ಕಾರದ ಅನುಮತಿ..!

ದೆಹಲಿ: ದೇಶದಲ್ಲಿನ್ನೂ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಜನರಿಗೆ, ಹೋಟೆಲ್‌ಗಳಿಗೆ ಅಡುಗೆ ಮಾಡುವುದಕ್ಕೆ ಅನುಕೂಲವಾಗಲಿ ಎಂದು ಪೆಟ್ರೋಲ್ ಬಂಕ್ ಗಳಲ್ಲಿಯೇ ‘ಸೀಮೆಎಣ್ಣೆ’ (Kerosene) ಮಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರಕಾರ ಅನುಮತಿ ನೀಡಿದೆ.
ಸೀಮೆಎಣ್ಣೆ ವಿತರಣೆ ನಿಯಮದಲ್ಲಿನ ಕೆಲವು ಕಠಿಣ ಷರತ್ತುಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಮುಂದಿನ 60 ದಿನಗಳ ಕಾಲ ಪೆಟ್ರೋಲ್ ಬಂಕ್ ಗಳಲ್ಲಿಯೂ ಸೀಮೆಎಣ್ಣೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
ಮಾ.29ರ ಭಾನುವಾರ ಕೇಂದ್ರ ಸರಕಾರ ಹೊರಡಿಸಿದ ಗೆಜೆಟ್ ಅಧಿಸೂಚನೆ ಪ್ರಕಾರ, ದೆಹಲಿ, ಹರಿಯಾಣ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ.
ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಪ್ರತಿ ಜಿಲ್ಲೆಗಳಲ್ಲಿ 2 ಸೇವಾ ಕೇಂದ್ರಗಳನ್ನ ಗುರುತಿಸಿ, ಪ್ರತಿ ಘಟಕದಲ್ಲಿ ಗರಿಷ್ಠ 5,000 ಲೀ. ಸೀಮೆಎಣ್ಣೆ ಸಂಗ್ರಹಿಸಬಹುದು ಎಂದು ಹೇಳಲಾಗಿದೆ.