ದೊಡ್ಡಬಳ್ಳಾಪುರ (Doddaballapura) : ಬೇಸಿಗೆ ಬಿಸಿಗೆ ತಾಲೂಕಿನ ಜನತೆ ಬಸವಳಿಯುತ್ತಿದ್ದು, ದೇಹವನ್ನು ತಣ್ಣಗಾಗಿಸಲು ಫ್ಯಾನ್, ಎಸಿ, ಕೂಲರ್ ಮೊರೆ ಹೊಗುತ್ತಿದ್ದಾರೆ.
ಆದರೆ ನಗರ ಬೆಸ್ಕಾಂ ವ್ಯಾಪ್ತಿಯಲ್ಲಿ ಏ.7 ರಿಂದ ವಿವಿಧ ಪ್ರದೇಶಗಳಲ್ಲಿ ವಾಹಕ ಬದಲಾವಣೆ ಕಾಮಗಾರಿ ನಡೆಸುವ ಸಲುವಾಗಿ ಸರಣಿಯಂತೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪಕ್ಕೆ ಬಸವಳಿಯುತ್ತಿರುವ ನಗರ ವಾಸಿಗಳ ಗಾಯದ ಮೇಲೆ ಬರೆ ಎಳೆಯುವಂತಾಗಿದೆ.
ಏಪ್ರಿಲ್.07, 08 ರ ಬಳಿಕ ನಾಳೆ ಏ.10 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುವ F02-Birla Super ಫೀಡರ್ ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿಯನ್ನು ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಏಪ್ರಿಲ್ 10 ರಂದು F02-Birla Super ಫೀಡರ್‌ನ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದ್ದು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಎಇಇ ವಿನಯ್ ಕುಮಾರ್ ಮನವಿ ಮಾಡಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ತೇರಿನ ಬೀದಿ, ರಂಗಪ್ಪ ಸರ್ಕಲ್, ತೂಬಗೆರೆಪೇಟೆ, ಚೌಡೇಶ್ವರಿ ಬೀದಿ, ಬ್ರಾಹ್ಮಣರ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)