ಚಿಕ್ಕಬಳ್ಳಾಪುರ: ನಗರದ ಹೊರವಲಯದ ಅಗಲಗುರ್ಕಿ ಯಲ್ಲಿರುವ ಬಿಜಿಎಸ್ (BGS) ಪಿಯು ಕಾಲೇಜಿನ ವಿದ್ಯಾರ್ಥಿ ಮರು ಮೌಲ್ಯ ಮಾಪನದಲ್ಲಿ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಯಶಸ್‌ಗೌಡ. ಎನ್. 600ಕ್ಕೆ 596 ಅಂಕಗಳನ್ನು ಪಡೆದಿದ್ದ. ಕನ್ನಡ ವಿಷಯದ ಮರುಮೌಲ್ಯ ಮಾಪನದಲ್ಲಿ 100 ಕ್ಕೆ 99 ಅಂಕಗಳನ್ನು ಗಳಿಸಿ, ಒಟ್ಟು 600 ಕ್ಕೆ598 ಅಂಕಗಳನ್ನು ಪಡೆ ಯುವುದರ ಮೂಲಕ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಪಿ. ಸಚಿನ್ ಇಂಗ್ಲಿಷ್ ವಿಷಯದ ಮರುಮೌಲ್ಯ ಮಾಪನದಲ್ಲಿ 100 ಕ್ಕೆ 97 ಅಂಕಗಳನ್ನು ಗಳಿಸಿ, ಒಟ್ಟು 600ಕ್ಕೆ 596 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾನೆ.