Harithalekhani story for the day: ಒಬ್ಬ ವಿದ್ಯಾರ್ಥಿ ಇದ್ದನು. ಅವನು ಅನೇಕ ಶಂಖೆಗಳನ್ನು ಕೇಳುತ್ತಿದ್ದನು. ಅದರಲ್ಲಿಯೂ ಅನವಷ್ಯಕ ಶಂಖೆಗಳನ್ನು ಹೆಚ್ಚು ಕೇಳುತ್ತಿದ್ದನು.
ಅವನು ಸದಾ ಗುರುಗಳಲ್ಲಿ “ನನಗೆ ಶೀಘ್ರವಾಗಿ ಈಶ್ವರನ ದರ್ಶನ ಮಾಡಿಸಿಕೊಡಿ, ನೀವು ಪಕ್ಷಪಾತ ಮಾಡುತ್ತೀರಿ, ನನ್ನ ಗುರುಬಂಧುಗಳಿಗೆ ಹೆಚ್ಚು ಜ್ಞಾನ ಕೊಡುತ್ತೀರಿ”, ಎಂದು ಹೇಳುತ್ತಿದ್ದನು.
ಆಗ ಅವನ ಗುರುಗಳು ಅವನಿಗೆ ಮಾರ್ಗದರ್ಶನ ಮಾಡಿದರು.
ಒಂದು ಸಲ ಅವನು ಗುರುಗಳ ಜೊತೆ ನದಿಗೆ ಸ್ನಾನ ಮಾಡಲು ಹೋದನು. ಅಲ್ಲಿ ಹೋದ ಮೇಲೆ ಗುರುಗಳು ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಸ್ವಲ್ಪ ಸಮಯ ಹಾಗೆ ಹಿಡಿದರು.
ಆಗ ಅವನು ಉಸಿರಾಡಲು ಚಡಪಡಿಸುತ್ತಿದ್ದನು. ನೀರಿನಿಂದ ಆಚೆ ಬಂದ ಮೇಲೆ ಗುರುಗಳು ಅವನಿಗೆ “ಎನು ಅನಿಸಿತು?”, ಎಂದು ಕೇಳಿದರು. ಆಗ ಅವನು “ಗುರುಗಳೇ, ಯಾವಾಗ ನಾನು ಉಸಿರಾಡಿಸುತ್ತೇನೇ? ಇಲ್ಲವಾದರೆ ಸಾಯುತ್ತೇನೆ, ಅಂತ ಅನಿಸಿತು” ಎಂದು ಗುರುಗಳಿಗೆ ಹೇಳಿದನು.
ಆಗ ಗುರುಗಳು “ನೀನು ಶ್ವಾಸಕ್ಕಾಗಿ ಹೇಗೆ ಚಡಪಡಿಸಿದೆ ಹಾಗೆ ಈಶ್ವರನ ದರ್ಶನಕ್ಕಾಗಿ ತಡಪಡಿಸಲಿಲ್ಲಾ! ಸಂದೇಹ ಒಂದು ವಿಘ್ನವಿದೆ, ಅದನ್ನು ದೂರ ಮಾಡು”, ಎಂದು ಹೇಳಿದರು.
ಕೃಪೆ; ಹಿಂದೂ ಜಾಗೃತಿ. (ಸಾಮಾಜಿಕ ಜಾಲತಾಣ)
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						