ಬೆಂಗಳೂರು: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಾರಕ್ಕಕ್ಕೇರಿದ ಹಿನ್ನೆಲೆಯಲ್ಲಿ ಮೇ-8ರಂದು ಸ್ಥಗಿತಗೊಂಡಿದ್ದ ಐಪಿಎಲ್ (IPL) ಪಂದ್ಯಾವಳಿ ಬೆಂಗಳೂರಿನಲ್ಲಿ ಇಂದು ಪುನರಾರಂಭವಾಗಲಿದೆ.
ಅತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸಲಿದೆ.
ಈಗಾಗಲೇ 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡವು 8 ಪಂದ್ಯಗಳನ್ನು ಗೆದ್ದು, ಟೇಬಲ್ ಟಾಪರ್ ಆಗಿರುವ ಗುಜರಾತ್ ತಂಡದಷ್ಟೇ ಅಂಕಗಳನ್ನು ಪಡೆದಿದ್ದರೂ ಕಡಿಮೆ ರನ್ ರೇಟ್ ಹಿನ್ನೆಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಕೋಲ್ಕತ್ತಾ ತಂಡವನ್ನು ಮಣಿಸಿ, ಮತ್ತೆ ಟೇಬಲ್ ಟಾಪರ್ ಸ್ಥಾನದತ್ತ ಪಾಟೀದಾರ್ ಪಡೆ ಕಣ್ಣಿಟ್ಟಿದೆ.
ಮತ್ತೊಂದೆಡೆ 11 ಅಂಕಗಳನ್ನು ಗಳಿಸಿ ಸದ್ಯ 6ನೇ ಸ್ಥಾನದಲ್ಲಿರುವ ಅಜಿಂಕ್ಯಾ ರಹಾನೆ ತಂಡವು ಈ ಪಂದ್ಯವನ್ನು ಅಷ್ಟೇ ಅಲ್ಲದೆ, ಆಡಲು ಬಾಕಿ ಉಳಿದಿರುವ ಇನ್ನೊಂದು ಪಂದ್ಯವನ್ನೂ ಹೆಚ್ಚಿನ ಅಂತರದಲ್ಲಿ ಹೇಗಾದರೂ ಗೆದ್ದು ಪ್ಲೇ ಆಫ್‌ನಲ್ಲಿ ಸ್ಥಾನ ಗಿಟ್ಟಿಸಬೇಕೆನ್ನುವ ಉತ್ಸಾಹದಲ್ಲಿಈಗಾಗಿಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಈಡೆನ್ ಗಾಡೆರ್ನ್ಸ್‌ನಲ್ಲಿ ಮಾಚ್-22ರಂದು ಅತಿಥೇಯ ಕೋಲ್ಕತ್ತಾವನ್ನು ಮಣಿಸಿದ ಆರ್‌ಸಿಬಿ ಶುಭಾರಂಭಮಾಡಿತ್ತು.
ಶನಿವಾರ ಆರ್‌ಸಿಬಿಯನ್ನು ಅದರ ತವರಿನಲ್ಲೇ ಮಣಿಸಿ ಸೇಡು ತೀರಿಸಿಕೊಳ್ಳಬೇಕೆಂಬ ಹಠ ಕೋಲ್ಕತ್ತಾ ತಂಡದ್ದಾಗಿದೆ.
ಮಾರ್ಚ್-28ರಂದು ಗುಜರಾತ್ ವಿರುದ್ದ ನಡೆದ ಪಂದ್ಯದಲ್ಲೂ ಆರ್‌ಸಿಬಿ ಗೆಲುವು ಪಡೆದಿತ್ತು. ಆದರೆ ತನ್ನ ಮೂರನೇ ಪಂದ್ಯದಲ್ಲಿ ಗುಜರಾತ್ ವಿರುದ್ದ ಪರಾಭವಗೊಂಡಿತ್ತು. ಆ ನಂತರದ ಪಂದ್ಯದಲ್ಲಿ ಮುಂಬೈ ವಿರುದ್ದ 12 ರನ್ ಗೆಲುವು ಸಾಧಿಸಿತು.
ಏಪ್ರಿಲ್-10ರಂದು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ, ಆ ಬಳಿಕ 13ರಂದು ರಾಜಸ್ಥಾನ ವಿರುದ್ದ ಗೆದಿತ್ತು, ಏಪ್ರಿಲ್-13ರಂದು ಪಂಜಾಬ್ ವಿರುದ್ಧ ಅದರ ತವರು ನೆಲದಲ್ಲಿ ಆರ್‌ಸಿಬಿ ಪಂದ್ಯವನ್ನು ಕಳೆದು ಕೊಂಡಿತ್ತು. ಆದರೆ ಆ ಬಳಿಕ ರಾಯಲ್ ಚಾಲೆಂಜರ್ಸ್ ಸತತ ವಾಗಿ ನಾಲ್ಕು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಏಪ್ರಿಲ್-20ರಂದು ಪಂಜಾಬ್ ವಿರುದ್ಧ, ಏಪ್ರಿಲ್ -24ರಂದು ರಾಜಸ್ಥಾನ ವಿರುದ್ದ, ಏಪ್ರಿಲ್-27ರಂದು ಡೆಲ್ಲಿ ವಿರುದ್ದ ಹಾಗೂ ಮೇ-3ರಂದು ಚೆನ್ನೈ ವಿರುದ್ದವೂ ಆರ್‌ಸಿಬಿ ಗೆದ್ದು ಗೆಲುವಿನ ನಗೆ ಬೀರಿದ್ದು, ಇದೇಗ ಐಪಿಎಲ್ ಪುನರಾರಂಭದ ಮೊದಲ ಪಂದ್ಯದಲ್ಲಿ ಮತ್ತೆ 5 ಕೋಲ್ಕತ್ತಾ ವಿರುದ್ಧ ಗೆದ್ದು ಪ್ಲೇ ಆಫ್ ಗುಂಪಿನ ಅಗ್ರಸ್ಥಾನದತ್ತ ತನ್ನ ಚಿತ್ತ ನೆಟ್ಟಿದೆ.
ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದ ಕೋಲ್ಕತ್ತಾ ತಂಡ ಇದೀಗ ಆರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಕನಸು ಅದರ ಪಾಲಿಗೆ ಇನ್ನೂ ಕೂಡಾ ಕಬ್ಬಿಣದ ಕಡಲೆ. ಅದು ರಾಜಸ್ಥಾನ ವಿರುದ್ಧ ಎರಡು ಪಂದ್ಯಗಳಲ್ಲಿ, ಹೈದರಾಬಾದ್ ವಿರುದ್ದ ಒಂದು, ಚೆನ್ನೈ ವಿರುದ್ಧ ಒಂದು ಮತ್ತು ಡೆಲ್ಲಿ ವಿರುದ್ಧ ತಲಾ ಒಂದು ಪಂದ್ಯ ಗೆದು ಲಾ ಒಂದು ಪಂದ್ಯ ಗೆದ್ದು ಗೆದ್ದು ಹಾಗೂ ಹಾಗೂ ಪಂಜಾಬ್ ವಿರುದ್ಧ ಪಂದ್ಯ ರದ್ದಾಗಿದ್ದ ಕಾರಣಕ್ಕೆ 1 ಅಂಕ ಗಳಿಸಿ, ಅಂಕಪಟ್ಟಿಯಲ್ಲಿ ಒಟ್ಟು 11 ಅಂಕಗಳನ್ನಷ್ಟೇ ಸಂಪಾದಿಸಲು ಶಕ್ತವಾಗಿದೆ.
ಈಗಾಗಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ದದ ಪಂದ್ಯವೂ ಕೋಲ್ಕತ್ತಾ ಪಾಲಿಗೆ ನಿಜಕ್ಕೂ ಸವಾಲಿನದ್ದೇ ಆಗಿದೆ.
ಫೋಟೋ ಕೃಪೆ: RCB, KKR X