ದೊಡ್ಡಬಳ್ಳಾಪುರ: ಕ್ಯಾನ್ಸರ್ (Cancer) ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಕೀಮೋಥೆರಪಿ (Chemotherapy) ಕೇಂದ್ರಗಳನ್ನು ಓಪನ್ ಮಾಡಲಾಗಿದೆ.
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ್, ಆಡಳಿತಾಧಿಕಾರಿ ಡಾ.ರಮೇಶ್ ಉದ್ಘಾಟಿಸಿದರು.

ಈ ವೇಳೆ ಡಾ.ನಿರಂಜನ್, ಡಾ.ಸುಷ್ಮಾ ಗೌಡ, ಡಾ.ಮಂಜುನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹೇಮಾವತಿ ಮತ್ತಿತರರಿದ್ದರು.
ಏನಿದು ಡೇ ಕೇರ್ ಕೀಮೋಥೆರಪಿ..?
ಕ್ಯಾನ್ಸರ್ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಆಗ್ತಾ ಇದೆ. ಹೀಗಾಗಿ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಓಪನ್ ಮಾಡಲಾಗಿದೆ.
ಪ್ರತಿ ವರ್ಷ 70 ಸಾವಿರ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಳ್ಳುತ್ತಾ ಇದೆ. ಅವರು ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಬಡವರು ಕಿದ್ವಾಯಿಯಂತಹ ಸಂಸ್ಥೆಗಳಿಗೆ ತೆರಳಬೇಕು. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಈ ಕೇಂದ್ರಗಳನ್ನು ಓಪನ್ ಮಾಡಿದೆ.
ಕೀಮೋ ಥೆರಪಿಗಾಗಿ 60% ರೋಗಿಗಳು 100 ಕಿಮೀ ಪ್ರಯಾಣ ಮಾಡಬೇಕು. ಸಮಯ ಮತ್ತು ತೊಂದರೆ, ಖರ್ಚು ಹೆಚ್ಚಾಗ್ತಾ ಇದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಓಪನ್ ಮಾಡಿರುವುದು ಬಹಳಷ್ಟು ಅನುಕೂಲಕರವಾಗಲಿದೆ.