ದೊಡ್ಡಬಳ್ಳಾಪುರ: ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ಗಂಭೀರವಾಗಿ ಗಾಯಗೊಂಡು, ಸಾವನಪ್ಪಿರುವ ಘಟನೆ ನಗರದ ಡಿಕ್ರಾಸ್ ಬಳಿ ಸಂಭವಿಸಿದೆ.
ಮೃತರನ್ನು 68 ವರ್ಷದ ಪ್ರಸನ್ನ ಕುಮಾರ್ ಎಂದು ಗುರುತಿಸಲಾಗಿದೆ.
ಡಿಕ್ರಾಸ್ ಬಳಿಯ ಖಾಸಗಿ ಆಸ್ಪತ್ರೆ ಹಿಂಭಾಗದ ಮನೆಯೊಂದರಲ್ಲಿ ವಾಸವಿದ್ದ ವೃದ್ಧರು, ಮಡದಿಯೊಂದಿಗೆ ಹೊಟೆಲ್‌ಗೆ ಬಂದು, ಊಟದ ಪಾರ್ಸೆಲ್ ತಗೆದುಕೊಂಡು ಹಿಂತಿರುಗಿ ಗೌರಿಬಿದನೂರು-ಯಲಹಂಕ ನಡುವಿನ ರಸ್ತೆ ದಾಟು ವೇಳೆ ವೇಗವಾಗಿ ಬಂದ ಬುಲೆಟ್ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವೃದ್ಧರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.