Amarnath Yatra 2025.. "Operation Shiva" to protect pilgrims

ಗುಡ್ಮಾರ್ನಿಂಗ್ ನ್ಯೂಸ್: ಅಮರನಾಥ ಯಾತ್ರೆ 2025.. ಯಾತ್ರಿಕರ ರಕ್ಷಣೆಗೆ “ಆಪರೇಷನ್ ಶಿವ”

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿನ ಹಿಂದೂಗಳ ಪವಿತ್ರ ಸ್ಥಳವಾದ ಅಮರನಾಥ ಯಾತ್ರೆ 2025 (Amarnath Yatra 2025) ಕೆಲ ದಿನಗಳಲ್ಲೇ ಆರಂಭವಾಗಲಿದೆ.

ಯಾತ್ರೆಯ ವೇಳೆ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲು ಭಾರತೀಯ ಸೇನಾಪಡೆ ‘ಆಪರೇಷನ್ ಶಿವ'( Operation Shiva) ಕಾರ್ಯಾಚರಣೆ ಕೈಗೊಂಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರು ಮತ್ತು ಯಾತ್ರಿಕರ ರಕ್ಷಣೆಗೆ ಹೆಚ್ಚಿನ ಗಮನ ಹರಿಸಲಾಗಿದೆ.

ಜು.3ರಿಂದ 38 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆಗೆ ಸಂಪೂರ್ಣ ಭದ್ರತೆ ಒದಗಿಸಲು ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಜಂಟಿಯಾಗಿ ‘ಆಪರೇಷನ್ ಶಿವ’ ಕಾರ್ಯಾಚರಣೆ ಆರಂಭಿಸಿದೆ.

ಆ.9ರಂದು ಯಾತ್ರೆ ಕೊನೆಗೊಳ್ಳಲಿದ್ದು, ಅಲ್ಲಿಯವರೆಗೂ ‘ಆಪರೇಷನ್ ಶಿವ’ ಯೋಧರು ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷೆ ಹಾಗೂ ಸುಗಮ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಯಾತ್ರೆ ಅವಧಿ 14 ದಿನಗಳಷ್ಟು ಕಡಿಮೆಯಾಗಿದೆ.

ಏ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆ ಭಾರತೀಯ ಸೇನೆಯು ಕೇಂದ್ರದ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್), ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಅಮರನಾಥ ದೇವಾಲಯ ಮಂಡಳಿ ಸಮನ್ವಯದಲ್ಲಿ ಆಪರೇಶನ್ ಶಿವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಸ್‌ಬಿ, ಐಟಿಬಿಪಿ ಮತ್ತು ಸಿಐಎಸ್‌ಎಫ್‌ನ ಒಟ್ಟು 42 ಸಾವಿರ ಯೋಧರು ಆಪರೇಷನ್ ಶಿವದಲ್ಲಿ ಭಾಗಿಯಾಗಿದ್ದಾರೆ.

ಈ ಭದ್ರತಾ ಕಾರ್ಯಾಚರಣೆಯಲ್ಲಿ ಅಮರನಾಥ ಯಾತ್ರೆಯ ಮಾರ್ಗ, ಡೋನ್ ಕಣ್ಣಾವಲು, ಸಿಸಿಟಿವಿ ಮೇಲ್ವಿಚಾರಣೆ ಮತ್ತು ಮೂರು ಹಂತದ ಭದ್ರತಾ ವ್ಯವಸ್ಥೆಯ ಭಾಗವಾಗಿ ಗುಂಡು ನಿರೋಧಕ ವಾಹನಗಳ ನಿಯೋಜನೆ ಮಾಡಲಾಗಿದೆ.

ಜಾಮರ್‌ಗಳನ್ನೂ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರಿಕರದ್ದಲ್ಲದ ಇತರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಅರಸೇನಾಪಡೆ ಮತ್ತು ಕಾಶ್ಮೀರದ ಪೊಲೀಸರ 50,000 ಸಿಬ್ಬಂದಿಗಳು ಪ್ರತಿದಿನವೂ ಅಮರನಾಥ ಯಾತ್ರೆ ಮಾರ್ಗದಲ್ಲಿ ಸ್ಫೋಟಕಗಳಿಗಾಗಿ ಶೋಧ ನಡೆಸಲಿದ್ದಾರೆ.

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!