ಅಮರಾವತಿ: ವಿಶ್ವಯೋಗ ದಿನದ (International Yoga Day) ಅಂಗವಾಗಿ ಆಂಧ್ರಪ್ರದೇಶ ಶನಿವಾರ ಆಯೋಜಿಸಿರುವ ಬೃಹತ್ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಬಂದರು ನಗರಿ ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಿಂದ ಭೋಗಪುರಂವರೆಗೆ 26 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ ಈ ಕಾರ್ಯ ಕ್ರಮ ನಡೆಯಲಿದ್ದು, 3 ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗ ಮಾಡಲು ಅವಕಾಶವಿದೆ. ಈ ಮೂಲಕ ಚಂದ್ರಬಾಬು ನಾಯ್ಡು ಸರಕಾರ ಹೊಸ ಗಿನ್ನೆಸ್ ದಾಖಲೆ ಸ್ಥಾಪಿಸಲು ಮುಂದಾಗಿದೆ.
ಈ ಹಿಂದೆ ಅಂತಾರಾಷ್ಟ್ರೀಯ ಯೋಗ ದಿನದಂದು ಲಕ್ಷಕ್ಕೂ ಹೆಚ್ಚು ಯೋಗಪಟುಗಳ ಮೂಲಕ ಯೋಗ ತಾಲೀಮು ನಡೆಸಿ ಸಾಂಸ್ಕೃತಿಕ ನಗರಿ ಮೈಸೂರು ಮಾಡಿದ್ದ ದಾಖಲೆಯನ್ನು ಮುರಿದು ಹೊಸ ದಾಖಲೆ ಮುರಿಯಲು ಆಂಧ್ರ ಸರಕಾರ ಮುಂದಾಗಿದೆ.
ಬೆಳಿಗ್ಗೆ 6:30 ರಿಂದ 8:00 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಗಿನ್ನೆಸ್ ವಿಶ್ವ ದಾಖಲೆ ಸೇರಿದಂತೆ ಹಲವಾರು ದಾಖಲೆಗಳನ್ನು ಸ್ಥಾಪಿಸುವ ಮತ್ತು ಮನ್ನಣೆ ಪಡೆಯುವ ರೀತಿಯಲ್ಲಿ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಜೂನ್ 21 ರಂದು ವಿಶಾಖಪಟ್ಟಣಂನಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಹಲವಾರು ಲಕ್ಷ ಜನರನ್ನು ಸಜ್ಜುಗೊಳಿಸುವ ಮೂಲಕ ಆಂಧ್ರಪ್ರದೇಶ ಸರಕಾರವು ಯೋಗದಲ್ಲಿ ದಾಖಲೆಗಳ ಸರಮಾಲೆಯನ್ನು ಸ್ಥಾಪಿಸುವ ಗುರಿ ಯನ್ನು ಹೊಂದಿದೆ.
ವಿಶ್ವದಾದ್ಯಂತ ಹಲವಾರು ದೇಶಗಳು ಆಚರಿಸುವ 11 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ‘ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ’ ಎಂಬ ಥೀಮ್ ನೊಂದಿಗೆ ಆಚರಿಸಲಾ ಗುತ್ತಿದೆ. ಸುಮಾರು 25,000 ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ನಮಸ್ಕಾರಗಳನ್ನು ಪ್ರದರ್ಶಿಸಲಿದ್ದಾರೆ.
#InternationalYogaDay
— N Chandrababu Naidu (@ncbn) June 20, 2025
A powerful message of wellness and harmony from the children of Andhra Pradesh to the world!
Today, 25,000 bright young stars from our tribal communities have created history by performing Surya Namaskar together, setting an extraordinary Guinness World… pic.twitter.com/0WiZx8grMp
ಸೂರ್ಯ ಕಾಲ ಏಕಕಾಲದಲ್ಲಿ ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸುವ ಅತಿ ದೊಡ್ಡ ಸಮೂಹ ಮತ್ತು ಅತಿ ಹೆಚ್ಚು ಜನರ ದಾಖಲೆಗಳನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ ಎಂದು ನಾಯ್ಡು ಹೇಳಿದ್ದಾರೆ.
ರಾಜ್ಯಾದ್ಯಂತ ಒಂದು ಲಕ್ಷ ಕೇಂದ್ರಗಳಲ್ಲಿ ಯೋಗ ಅವಧಿಗಳನ್ನು ಆಯೋಜಿಸುವುದು ಮತ್ತು ವಿಶಾಖಪಟ್ಟಣದಲ್ಲಿ ಯೋಗ ಚಟುವಟಿಕೆಗಳಲ್ಲಿ ಭಾಗವಹಿಸಲು ಐದು ಲಕ್ಷ ಜನರನ್ನು ಆಕರ್ಷಿಸುವುದು ಸರ್ಕಾರದ ಗುರಿಯಾಗಿದೆ.
ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಿಂದ ಭೋಗಪುರಂವರೆಗಿನ 26 ಕಿಮೀ ವ್ಯಾಪ್ತಿಯಲ್ಲಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಏಕಕಾಲದಲ್ಲಿ 3.19 ಲಕ್ಷ ಜನರು ಯೋಗ ಮಾಡಬಹುದು ಎಂದು ಚಂದ್ರಬಾಬು ನಾಯ್ಡು ಹೇಳಿದರು.
ರಾಜ್ಯದ ಯೋಗ ದಿನದ ಚಟುವಟಿಕೆಗಳಲ್ಲಿ ಭಾಗವಹಿಸಲು 2.39 ಕೋಟಿ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.ಯೋಗ ದಿನದ ಪೂರ್ವಭಾವಿಯಾಗಿ, ದಕ್ಷಿಣ ರಾಜ್ಯವು ಯೋಗಾಂಧ್ರ ಅಭಿಯಾನವನ್ನು ಪ್ರಾರಂಭಿಸಿದೆ.