ದೊಡ್ಡಬಳ್ಳಾಪುರ: ರಸ್ತೆ ಕಾಮಗಾರಿಗೆಂದು ತೋಡಲಾಗಿದ್ದ ಟ್ರಂಚ್‌ಗೆ ನಿಯಂತ್ರಣ ತಪ್ಪಿ ಬಿದ್ದು (Accident) ಬೈಕ್ ಸವಾರ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತನನ್ನು ಮೆಳೇಕೋಟೆ ಸಮೀಪದ ಚೋಗೊಂಡಹಳ್ಳಿ ನಿವಾಸಿ 22 ವರ್ಷದ ಶ್ರೇಯಸ್ ಎಂದು ಪೊಲೀಸರು ಗುರುತಿಸಿದ್ದಾರೆ.
ಇಂದು (ಜೂ.30) ಸಂಜೆ ಕಡ್ಡಿಪುಡಿ ಕಾರ್ಖಾನೆಯಿಂದ ಕೊನಘಟ್ಟಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ರಸ್ತೆ ಕಾಮಗಾರಿಗೆಂದು ಅಗೆಯಲಾಗಿರುವ ಟ್ರಂಚ್ಗೆ ಬಿದ್ದು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.