ದೊಡ್ಡಬಳ್ಳಾಪುರ: ಇನೋವಾ ಕಾರು ಪಲ್ಟಿ ಹೊಡೆದು ಐದು ಮಂದಿ ಸಾವನಪ್ಪಿರುವ ಸ್ಥಳದ ಸಮೀಪದಲ್ಲಿಯೇ ಮತ್ತೊಂದು ಅಪಘಾತ (Accident) ಸಂಭವಿಸಿದೆ.
ಲಾರಿ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಗೊಲ್ಲಹಳ್ಳಿ ಬಳಿ ನಡೆದಿದೆ.
ಲಾರಿ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿ.
ನಿನ್ನೆಯಿಂದೀಚೆಗೆ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 5 ಅಪಘಾತಗಳು ಸಂಭವಿಸಿದ್ದು, 6 ಮಂದಿ ಸಾವನಪ್ಪಿ, ಅನೇಕರು ಗಾಯಗೊಂಡಿದ್ದಾರೆ.