ಬೆಂಗಳೂರು: ನಗರದ ನಿಮಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ 166ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯ (State-level abacus competition) ಫಲಿತಾಂಶ ಹೊರಬಿದ್ದಿದೆ.
ಭಾನುವಾರ ಬೆಳಗ್ಗೆ ಇಲ್ಲಿನ ನಿಮಾನ್ದ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಿದ್ದ 166ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ ನಡೆಸಲಾಯಿತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಅಬಾಕಸ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ, ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೊಡ್ಡಬೆಳವಂಗಲ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥೆ ರಶ್ಮಿ ಅವರ ನೇತೃತ್ವದಲ್ಲಿ ವಿವಿಧ ಶಾಲೆಗಳ 16ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೂರು ನಿಮಿಷದಲ್ಲಿ ವಿವಿಧ ಆಯಾಮಗಳ ಅತಿ ಹೆಚ್ಚು ಲೆಕ್ಕಗಳನ್ನು ಮಾಡುವ ಮೂಲಕ 2ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿಗಳನ್ನು, 9ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 5ವಿದ್ಯಾರ್ಥಿಗಳು ಬೆಳ್ಳಿ ಪದಗಳನ್ನು ಪಡೆದಿದೆ.