ದೊಡ್ಡಬಳ್ಳಾಪುರ: ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಸಿಮೆಂಟ್ ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ ಬಾಶೆಟ್ಟಿಹಳ್ಳಿ ಪೆಟ್ರೋಲ್ ಬಂಕ್ ಬಳಿ ಇಂದು ಮುಂಜಾನೆ ಸಂಭವಿಸಿದೆ.
ಹೊಟೆಲ್ನಲ್ಲಿ ಟೀ ಸರಬರಾಜು ಮಾಡುವ
ಬಿಹಾರ ಮೂಲದ ಯುವಕ 18 ವರ್ಷದ ಬಿಕ್ಕು ಕುಮಾರ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ಬಿಕ್ಕುಕುಮಾರ್ ದೊಡ್ಡಬಳ್ಳಾಪುರ ಕಡೆಯಿಂದ ಬಾಶೆಟ್ಟಿಹಳ್ಳಿ ಕಡೆಗೆ ಮೊಪೆಡ್‌ನಲ್ಲಿ ತೆರಳುತ್ತಿದ್ದ ವೇಳೆ, ಬಾಶೆಟ್ಟಿಹಳ್ಳಿ ಕಡೆಯಿಂದ ಎದುರಾದ ಸಿಮೆಂಟ್ ಲಾರಿ ಪೆಟ್ರೋಲ್ ಬಂಕ್ ಬಳಿ ಏಕಾಏಕಿ ಡಿವೈಡರ್ ಹಾರಿ ಬದಲಿ ರಸ್ತೆ ಬಂದು ಗುದ್ದಿಕೊಂಡು ಹೋಗಿ ರಸ್ತೆ ಬದಿಯಿದ್ದ ಕೆಸರಯಮು ಮಣ್ಣಿನಲ್ಲಿ ನಿಂತಿದೆ.
ಇದರಡಿ ಸಿಲುಕಿದ ಬಿಕ್ಕು ಕುಮಾರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಚಾಲಕನ ನಿಯಂತ್ರಣ ತಪ್ಪಿ ಕೆಸರಲ್ಲಿ ಲಾರಿ ಸಿಲುಕಿದೆ ಎಂದು ಕಂಡಬಂದಿತ್ತಾದರೂ, ಬಳಿಕ ಪರಿಶೀಲನೆ ನಡೆಸಿದಾಗ ಲಾರಿಯಡಿ ಬಿಕ್ಕು ಕುಮಾರ್ ಮೃತ ದೇಹ ಹಾಗು ಮೊಪೆಡ್ ಕಂಡುಬಂದಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹವನ್ನು ಶವಾಗಾರಕ್ಕೆ ವರ್ಗಾಯಿಸಿದ್ದಾರೆ.
ಬಾಶೆಟ್ಟಿಹಳ್ಳಿ ಪೆಟ್ರೋಲ್ ಬಂಕ್ ಬಳಿ, ಅವೈಜ್ಞಾನಿಕ