ನವದೆಹಲಿ: ಸತತ 8 ವರ್ಷಗಳ ಬಳಿಕ ಮೊದಲ ಬಾರಿಗೆ ಮೋದಿ ಸರ್ಕಾರ ಒಪ್ಪಿಕೊಂಡಿದೆ, GSTಯಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು.
ಹೌದು ದೇಶದ ಜನರಿಗೆ ಬರೆ ಎಳೆಯುತ್ತಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ (GST) ಪರಿಷ್ಕರಣೆ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿರ್ಣಯವಾದರೂ, ಚರ್ಚೆಗೆ ಒಳಗಾಗಿರುವುದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಗಬ್ಬರ್ ಸಿಂಗ್ ಟ್ಯಾಕ್ಸ್ ಹೇಳಿಕೆ.
ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೆರಿಗೆ ಬದಲಾವಣೆಗಳಿಗೆ ನಾನಾ ರಾಜ್ಯಗಳ ಹಣಕಾಸು ಸಚಿವರು ಅನುಮೋದನೆ ನೀಡಿದ್ದಾರೆ.
ಪ್ರಸ್ತುತ, ನಾಲ್ಕು ಜಿಎಸ್‌ಟಿ ಫ್ಲ್ಯಾಬ್‌ಗಳಿದ್ದು, ಶೇ. 5, ಶೇ, 12, ಶೇ. 18 ಮತ್ತು ಶೇ, 28 ರಷ್ಟು ತೆರಿಗೆ ವಿಧಿಸಲಾ ಗುತ್ತಿದೆ. ಇನ್ನು ಮುಂದೆ ಶೇ. 12 ಮತ್ತು ಶೇ. 28ರ ತೆರಿಗೆ ಸ್ಪ್ಯಾಬ್‌ಗಳು ರದ್ದಾಗಲಿದ್ದು ಶೇ. 5 ಮತ್ತು ಶೇ. 18ರ ಎರಡು ಸ್ತರದ ತೆರಿಗೆ ಮಾತ್ರ ಉಳಿದುಕೊಳ್ಳಲಿದೆ.
ದೀಪಾವಳಿ ಹೊತ್ತಿಗೆ ಜನರು ಸಿಹಿ ಸುದ್ದಿ ಪಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ಸವದ ಭಾಷಣದಲ್ಲಿ ಹೇಳಿದ್ದರು. ಈಗ ದಸರೆಯ ಆರಂಭದಲ್ಲೇ ಜಿಎಸ್‌ಟಿ ದರ ಇಳಿಸಲು ನಿರ್ಧರಿಸಲಾಗಿದೆ.
ಜವಳಿ, ರಸಗೊಬ್ಬರ, ನವೀಕರಿಸಬಹುದಾದ ಇಂಧನ ಗಳು, ವಾಹನಗಳು, ಕರಕುಶಲ ವಸ್ತುಗಳು, ಕೃಷಿ, ಆರೋಗ್ಯ, ವಿಮಾ ವಲಯಗಳು ಈ ಬದಲಾವಣೆಯಿಂದ ಲಾಭ ಪಡೆಯಲಿವೆ.
ಕೇಶ ತೈಲ, ಸೋಪು, ಶಾಂಪೂಗಳು, ಹಲ್ಲುಜ್ಜುವ ಬ್ರಷ್‌ಗಳು, ಟೂತ್‌ಪೇಸ್ಟ್, ಸೈಕಲ್ ಗಳು ಮತ್ತು ಅಡುಗೆ ಸಾಮಾನುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ. ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಜನಸಾಮಾನ್ಯರ ಪಾಲಿಗೆ ದುಬಾರಿಯಾಗಿರುವ ವೈದ್ಯಕೀಯ ವಿಮೆಯನ್ನು ಎಲ್ಲರಿಗೂ ಕೈಗೆಟು ಕುವಂತೆ ಮಾಡಲು ಸರಕಾರ ಉದ್ದೇಶಿಸಿದೆ.
ಗಬ್ಬರ್ ಸಿಂಗ್ ಟ್ಯಾಕ್ಸ್..? ದೀಪಾವಳಿ ಕೊಡುಗೆ..?
ನಿನ್ನೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೆರಿಗೆ ಬದಲಾವಣೆ ಘೋಷಣೆಯನ್ನು ಎನ್‌ಡಿಎ ಮೈತ್ರಿಕೂಟ ಸ್ವಾಗತಿಸಿ, ದೀಪಾವಳಿ ಉಡುಗೊರೆ ಎಂದರೆ, ಇಂಡಿ ಮೈತ್ರಿಕೂಟ 2017 ರಲ್ಲಿ ರಾಹುಲ್ ಗಾಂಧಿಯವರ ಆರೋಪದ ಗಬ್ಬರ್ ಟ್ಯಾಕ್ಸ್ ನಿಂದ ದೇಶದ ಜನತೆಗೆ ತೊಂದರೆಯಾಗುತ್ತಿದೆ ಎಂಬುದನ್ನು ಮೋದಿ ಸರ್ಕಾರ ಒಪ್ಪಿಕೊಂಡಿದೆ ಎಂದು ಲೇವಡಿ ಮಾಡಿದೆ.
8 ವರ್ಷಗಳಿಂದ ಮೋದಿ ಸರ್ಕಾರ ಕಾಪಾಡುತ್ತಿದ್ದ ಆ ತಪ್ಪು ನಿರ್ಣಯದಿಂದಾಗಿ (GST 18%) ದೇಶದ ಜನತ ಇದರ ಪರಿಣಾಮವನ್ನು ಅನುಭವಿಸಬೇಕಾವಂತೆ ಆಗಿತ್ತು. ಆದರೆ ಕೊನೆಗೂ ಮೋದಿ ಸರ್ಕಾರ ತನ್ನ ತಪ್ಪನ್ನು 8 ವರ್ಷಗಳ ಬಳಿಕ ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.
ಒಂದು ವೇಳೆ ಮೋದಿ ಸರ್ಕಾರದ ಈ ಪರಿಷ್ಕರಣೆಯನ್ನು, ಪರಿಹಾರ ಎಂದು ಕ್ರೆಡಿಟ್ ಪಡೆಯಲು ಮುಂದಾಗುವುದಾದರೆ, ಮೊದಲಿಗೆ ಈ ಪ್ರಶ್ನೆಗೆ ಉತ್ತರ ನೀಡಬೇಕಿದ್ದು, ಈ ಪರಿಹಾರವನ್ನು ಕಂಡು ಹಿಡಿಯಲು 8 ವರ್ಷಗಳ ಕಾಲ ಏಕೆ ಬೇಕಾಯ್ತು ಎಂದು.
ಏಕೆಂದರೆ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಅಂಗಡಿ ಮಾಲೀಕರು ಈ GST ಯಿಂದಾಗಿ ಅವರ ಬದುಕನ್ನು ಬೀದಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಆಕ್ರೋಶವನ್ನು ಬಿಜೆಪಿ ಸಚಿವ ನಿತಿನ್ ಗಡ್ಕರಿ ಅವರು ಕೂಡ ವ್ಯಕ್ತಪಡಿಸಿದ್ದು, ನಿರ್ಮಲಾ ಸೀತರಾಮನ್ ಅವರಿಗೆ ಆರೋಗ್ಯ ವಿಮೆಗೆ ವಿಧಿಸಲಾಗುತ್ತಿರುವ GST ಕುರಿತು ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಅವರಿಗೆ ಯಾವ ಬಿಜೆಪಿ ನಾಯಕರು ಬೆಂಬಲ ಕೊಡಲಿಲ್ಲ.
ಆದರೆ ಈ ಗಬ್ಬರ್ ಸಿಂಗ್ ಟ್ಯಾಕ್ಸ್ ಕುರಿತು ಏಕಾಂಗಿಯಾಗಿ ದನಿ ಎತ್ತಿ ಹೋರಾಟ ನಡೆಸಿದ್ದು ರಾಹುಲ್ ಗಾಂಧಿ, ಏಕೆಂದರೆ 2017ರ ಸೆಪ್ಟೆಂಬರ್ ತಿಂಗಳಲ್ಲಿ GST ಗೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಹೆಸರಿಟ್ಟು ಹೋರಾಟ ಆರಂಭಿಸಿದರು.
ಈ ಟ್ಯಾಕ್ಸ್ ನಿಂದ ದೇಶದ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳನ್ನು ದೇಶದ ಜನರೆದುರು ಬಿಚ್ಚಿಟ್ಟಿರು. ಏಕೆಂದರೆ ಶೇ.18 ತೆರಿಗೆ, ನಾಲ್ಕು ನಾಲ್ಕು ಸ್ಲಾಬ್‌ಗಳಲ್ಲಿನ ಗೊಂದಲದ ಕುರಿತು ಪ್ರಶ್ನೆ ಮಾಡಿದ್ದರು. ಇದು ತೀವ್ರ ಚರ್ಚೆ ಗೆ ಒಳಗಾಗಿ ಡಿ.4 2017ರಲ್ಲಿ ಟ್ವಿಟರ್ ನಲ್ಲಿ #Gabbar Singh Tax ಎಂದು ಟ್ರೆಂಡಿಂಗ್ ನಡೆಯಿತು.
We will not allow BJP to impose a Gabbar Singh Tax on India. They cannot break the back of the small and medium businesses, crush the informal sector and destroy millions of jobs. #GSTCouncilMeet
— Rahul Gandhi (@RahulGandhi) November 10, 2017
ಸತತ 8 ವರ್ಷಗಳ ಕಾಲ ರಾಹುಲ್ ಗಾಂಧಿ ಅವರು GST ಸರಳಿ ಕರಣ ಮಾಡಬೇಕೆಂದು ಒತ್ತಾಯಿಸುತ್ತಾ ಬಂದಿದ್ದಾರೆ. ಏಕೆಂದರೆ 2016ರ ಅಕ್ಟೋಬರ್ 18ರ GST ಕೌನ್ಸಿಲ್ ಸಭೆಯ ಮುನ್ನವೇ ಶೇ.18 ತೆರಿಗೆ ಲೋಪವಿದೆ, ದೇಶದ ಬಡ, ಮದ್ಯಮ ವರ್ಗದ ಜನತೆ ಸಂಕಷ್ಟ ತರಲಿದೆ, ಈ ನಿರ್ಣಯ ಸಾಹುಕಾರ ಮತ್ತು ಬಡವರಿಗೆ ಒಂದೇ ತೆರಿಗೆಯ ಬರೆ ಹಾಕುತ್ತದೆ, ಕಾಂಗ್ರೆಸ್ ಒತ್ತಾಯ ಏನೆಂದರೆ ಜನಸಾಮಾನ್ಯರಿಗೆ ಈ ತೆರಿಗೆಯ ಬಿಸಿ ತಟ್ಟಬಾರದು ಎಂದು ಹೇಳಿದ್ದರು.
ಈ ಕುರಿತು ರ್ಯಾಲಿ, ಸಭೆ, ಸುದ್ದಿಗೋಷ್ಠಿ, ಸಂಸತ್ತಿನಲ್ಲಿನ ರಾಹುಲ್ ಗಾಂಧಿ ಅವರ ಒತ್ತಯಾದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆ ವೇಳೆ ರಾಹುಲ್ ಗಾಂಧಿ ಅವರು ಹೇಳಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ ಹೇಳಿಕೆಯನ್ನು ಬಿಜೆಪಿ IT ಸೆಂಟರ್, ಗೋದಿ ಮೀಡಿಯಾಗಳು ಲೇವಡಿ ಮಾಡಿದ್ದವೋ.. 8 ವರ್ಷಗಳ ಬಳಿಕ ಈಗ ಅದನ್ನೇ ಮೋದಿ ಸರ್ಕಾರದಿಂದ ಪರಿಹಾರ, ದೀಪಾವಳಿ ಗಿಪ್ಟ್ ಎಂದು ವರದಿ ಮಾಡುತ್ತಿವೆ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
GST revision will be hailed as a massive victory for Rahul Gandhi. He was fighting for it for 9 long years
— Ankit Mayank (@mr_mayank) September 4, 2025
— Ravish Kumar 🔥🔥🔥 pic.twitter.com/eu07vLYDsB