ಮಣಿಪುರ; 2023ರ ಮೇ ನಲ್ಲಿ ಮಣಿಪುರದಲ್ಲಿ ಭಾರೀ ಹಿಂಸಾಚಾರ ಸಂಭವಿಸಿದ ನಂತರ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ್ದಾರೆ.
ಶನಿವಾರ ಇಂಫಾಲಕ್ಕೆ ತೆರಳಿದ ಅವರು, ಭಾರೀ ಮಳೆಯ ಕಾರಣದಿಂದ ಅಲ್ಲಿಂದ ಚುರಾಚಂದ ಪುರಕ್ಕೆ ರಸ್ತೆ ಮಾರ್ಗದಲ್ಲಿ 1.5 ಗಂಟೆ ಕಾಲ ಪ್ರಯಾಣಿಸಿದರು.

ಎರಡೂ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಅವರು ನಾನು ನಿಮ್ಮೊಂದಿಗಿದ್ದೇನೆ, ಸರಕಾರ ನಿಮ್ಮೊಂದಿಗಿದೆ. ಹೊಸ ಬೆಳಗು ಶುರುವಾಗಿದೆ ಎಂದು ಮಣಿಪುರ ಜನತೆಗೆ ಭರವಸೆ ನೀಡಿದರು.
ಶಾಲಾ ಮಕ್ಕಳು ರಸ್ತೆಯಲ್ಲಿ ನಿಂತು ಮೋದಿ ಅವರಿಗೆ ಅದ್ಧೂರಿ ಸ್ವಾಗತಕೋರಿದರೆ. ಈ ಪ್ರವಾಸಕ್ಕೆ ಹಲವೆಡೆ ಗೋ ಬ್ಯಾಕ್ ಮೋದಿ ಪ್ರತಿಭಟನೆ ನಡೆದಿವೆ.
मणिपुर में ‘Modi Go Back’ के नारे लगे
— Sandeep Singh (@ActivistSandeep) September 13, 2025
वीडियो देशभर में फैलना चाहिए
फल तो मिलना ही था
pic.twitter.com/yensQNymwy
ಚುರಾಚಂದಪುರದಲ್ಲಿ ಮೋದಿ ಒಟ್ಟು 7300 ಕೋಟಿ ರೂ. ಮೊತ್ತದ 14 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಒಳಚರಂಡಿ, ಮಹಿಳಾ ಹಾಸ್ಟೆಲ್ ನಿರ್ಮಾಣ, ಶಾಲೆಗಳು, ಅತ್ಯಾಧು ನಿಕ ಸೌಲಭ್ಯಗಳಿರುವ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಅನಂತರ ಇಂಫಾಲದಲ್ಲಿ 1200 ಕೋಟಿ ರೂ. ಮೊತ್ತದ 17 ಯೋಜನೆಗಳನ್ನು ಆರಂಭಿಸಿದರು.
ನೆಲೆ ಕಳೆದುಕೊಂಡ ಸಂತ್ರಸ್ತರೊಂದಿಗೆ ಸಂವಾದ: 2023ರ ಗಲಭೆಯ ಕೇಂದ್ರ ಸ್ಥಾನ ಮಣಿಪುರದ ಚುರಾಚಂದಪುರ. ಅಲ್ಲಿ ಕುಕಿ-ಮೈತೇಯಿ ನಡುವೆ ಭಾರೀ ಹೊಡೆದಾಟವಾಗಿ 260ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಆ ವೇಳೆ ಚುರಾಚಂದಪುರದಲ್ಲಿ 60000 ಮಂದಿ ಮನೆ ಕಳೆದುಕೊಂಡಿದ್ದರು.
ಅವರನ್ನು ಮೋದಿ ಭೇಟಿಯಾಗಿ ಮಾತುಕತೆ ನಡೆಸಿದರು. ನೆಲೆ ಕಳೆದುಕೊಂಡಿರುವ ವ್ಯಕ್ತಿಗಳ ಗೋಳುಗಳಿಗೆ ಮೋದಿ ಎರಡು ವರ್ಷಗಳ ಬಳಿಕ ಕಿವಿಯಾದರು. ವೃದ್ಧರು, ಮಕ್ಕಳನ್ನು ಭೇಟಿಯಾಗಿ ಧೈರ್ಯ ತುಂಬಿದರು.