ದೆಹಲಿ: ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ (Mohan Lal) ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು.
ಉತ್ತಮ ಪ್ರಾದೇಶಿಕ ಚಿತ್ರದಡಿ ಕನ್ನಡದಡಿ ಕಂದೀಲು ಸಿನಿಮಾಕ್ಕೆ ಪ್ರಶಸ್ತಿ ನೀಡಲಾಯಿತು. ನಿರ್ಮಾಪಕರು ಪ್ರಶಸ್ತಿ ಪಡೆದರು. ರಾಷ್ಟ್ರಪತಿ ದೌಪದಿ ಮುರ್ಮು ಪ್ರಶಸ್ತಿಗಳನ್ನು ಹಸ್ತಾಂತರಿಸಿದರು.
President #DroupadiMurmu confers Superstar #Mohanlal with the #DadasahebPhalke Award, Indian cinema's highest recognition at the 71st National Film Awards.#NationalAwards #Trending pic.twitter.com/VNknQILIBC
— Filmfare (@filmfare) September 23, 2025
ಮಲಯಾಳಂ, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಒಟ್ಟು 350ಕ್ಕೂ ಅಧಿಕ ಚಿತ್ರಗಳಲ್ಲಿ ಮೋಹನ್ ಲಾಲ್ ನಟಿಸಿದ್ದರು. ಕಲಾತ್ಮಕ ಹಾಗೂ ಮಾಸ್ ಚಿತ್ರಗಳ ಮೂಲಕ ಜನಜನಿತರಾಗಿದ್ದಾರೆ.
ಸಿನಿಮಾರಂಗದಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಫಾಲ್ಕೆ ಸ್ವೀಕರಿಸುತ್ತಿರುವ 2ನೇ ಮಲಯಾಳಂ ವ್ಯಕ್ತಿ ಮೋಹನ್ ಲಾಲ್. ಇದಕ್ಕೂ ಮುನ್ನ ಆಡೂರು ಗೋಪಾಲಕೃಷ್ಣನ್ಗೆ ಈ ಪ್ರಶಸ್ತಿ ನೀಡಲಾಗಿತ್ತು.
ಒಟ್ಟಾರೆ ಈ ಗೌರವ ಪಡೆದ ಭಾರತೀಯ ಚಿತ್ರರಂಗದ 55ನೇ ವ್ಯಕ್ತಿಯಾಗಿದ್ದಾರೆ.