ಬೆಂಗಳೂರು: ಉತ್ತರ ಕರ್ನಾಟಕ ಹಾಗು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಪ್ರವಾಹ ಹಾಗೂ ಮಳೆಯಿಂದಾಗಿ ರೈತರು, ಬಡವರು ಕಂಗಾಲಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರವೇ ಪರಿಹಾರ ಕೊಡಲಿ ಅಂತ ಕೈ ಕಟ್ಟಿ ಕಾಯ್ತಾ ಕೂತಿದ್ದಾರೆ ಆದ್ರೆ ಅಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಳಾಗಿದ್ದಾಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡದೆ ಪರಿಹಾರ ವಿತರಣೆ ಮಾಡಿದ್ರು ರಾಜ್ಯ ಸರ್ಕಾರ ರೈತರಿಗೆ, ಮಳೆ ಸಂತ್ರಸ್ತರಿಗೆ ಅನ್ಯಾಯ ಮಾಡ್ತಿದೆ ನಾವು ನಮ್ಮ ನಾಯಕರು ನಾಳೆ, ನಾಡಿದ್ದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಡ್ತೇವೆ, ರೈತೆ ಸಮಸ್ಯೆ ಆಲಿಸ್ತೇವೆ ಅಂತ ಹೇಳಿದ್ರು.
ತಮಿಳುನಾಡು ಕಾಲ್ತುಳಿತ ಪ್ರಕಾರಣ
ಕರೂರು ಕಾಲ್ತುಳಿತ ಪ್ರಕರಣ ಬಹಳ ನೋವು ತಂದಿದೆ. ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಕೋರುತ್ತೇನೆ. ಕಾರ್ಯಕ್ರಮದ ಆಯೋಜಕರು ಎಚ್ಚರಿಕೆ ವಹಿಸಬೇಕಿತ್ತು. ಕರ್ನಾಟಕದಲ್ಲಿ RCB ಕಾಲ್ತುಳಿತ ಪ್ರಕರಣ ಕಣ್ಣ ಮುಂದೆ ಹಾಗೆ ಇದೆ. ತಮಿಳುನಾಡು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತ ಹೇಳಿದರು
ಧರ್ಮಸ್ಥಳ ವಿಚಾರ
ಧರ್ಮಾಸ್ಥಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಬುರುಡೆ ಗ್ಯಾಂಗ ಸತ್ಯ ಒಪ್ಪಿಕೊಂಡ ಮೇಲೆ ನಾವು ಎಸ್ ಐಟಿ ರಚನೆ ಮಾಡಿದ್ದಕ್ಕೆ ಸತ್ಯಾ ಆಚೆ ಬಂದಿದೆ ಅಂತ ಹೇಳಿದ್ದಾರೆ ಆದ್ರೆ ಅಲ್ಲಿವರೆಗು ಧರ್ಮಸ್ಥಳ ಕ್ಕೆ ಅಪಪ್ರಚಾರ ಹೊಣೆಯನ್ನು ಹೊರವವರು ಯಾರು ಅಂತ ಪ್ರಶ್ನೆ ಮಾಡಿದರು. ಇವರ ಒಂದು ಅವಿವೇಕತನದಿಂದ ರಾಜ್ಯದ ಕೋಟ್ಯಾಂತರ ಮಂಜುನಾಥ ಭಕ್ತರಿಗೆ ನೋವು ತಂದಿದ್ದು ಇದನೆಲ್ಲ ರಾಜ್ಯದ ಜನ ಗಮನಿಸುತ್ತಿದ್ದಾರೆ ಅಂತ ಹೇಳಿದರು
ಜಾತಿ ಸಮೀಕ್ಷೆ ವಿಚಾರ
ಸಮೀಕ್ಷೆ ಬಗ್ಗೆ ನಾವು ಯಾವುದೇ ತೀರ್ಮಾನ ತಗೊಂಡಿಲ್ಲ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಎಲ್ರೂ ಹಿಂದೂ ಎಂದೇ ಉಲ್ಲೇಖ ಮಾಡಬೇಕು ಅದು ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು. ವೀರಶೈವ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ಸಮಾಜಗಳು ಹಿಂದೂ ಅಂತ ಬರೆಸಲಿ ಗೊಂದಲ ಮಾಡಿಕೊಳ್ಳದೇ ಧರ್ಮದ ಕಾಲಂನಲ್ಲಿ ಹಿಂದೂ ಅಂತ ಬರೆಸಿ ಅಂತ ಮನವಿ ಮಾಡಿದರು