ನವದೆಹಲಿ: ವಿರೋಧ ಪಕ್ಷಗಳ ವೋಟ್ ಚೋರಿ ಆರೋಪದ ಬಳಿಕ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆಯ (Bihar Elections) ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು (ಸೋಮವಾರ) ಪ್ರಕಟಿಸಿದೆ.
#Bihar #BiharElections2025 #ECI pic.twitter.com/1qZ0VD901g
— Election Commission of India (@ECISVEEP) October 6, 2025
ಈ ಕುರಿತಂತೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
🗓️#SCHEDULE for the GENERAL ELECTION TO THE LEGISLATIVE ASSEMBLY OF BIHAR 2025 – Two Phases
— Election Commission of India (@ECISVEEP) October 6, 2025
Details 👇#Bihar #BiharElections2025 pic.twitter.com/ZeTBbpX32O
ಅಕ್ಟೋಬರ್ 10ರಂದು ಮೊದಲನೇ ಹಂತಕ್ಕೆ ಹಾಗೂ ಅಕ್ಟೋಬರ್ 13ರಂದು ಎರಡನೇ ಹಂತಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 (ಮೊದಲನೇ ಹಂತ) ಹಾಗೂ ಅಕ್ಟೋಬರ್ 20 (ಎರಡನೇ ಹಂತ) ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ: ವೋಟ್ ಚೋರಿ: ಸಾಕ್ಷಿ ಸಹಿತ ರಾಹುಲ್ ಗಾಂಧಿ ಗಂಭೀರ ಆರೋಪ| Video