ದೆಹಲಿ: ವಾಟ್ಸಾಪ್‌ನಲ್ಲಿ (WhatsApp) ಅಪರಿಚಿತರಿಂದ ಬಂದ ಮದುವೆ ಆಹ್ವಾನ ಪತ್ರಿಕೆಯನ್ನೇನಾದರೂ (Wedding invitation) ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಅಷ್ಟೂ ಹಣ ಲೂಟಿಯಾಗುತ್ತದೆ ಎಂಬ ಜಾಗೃತಿ ಸಂದೇಶವನ್ನು ಗುರುಗ್ರಾಮ ಪೊಲೀಸರು (Police) ನೀಡಿದ್ದಾರೆ.
ವಾಟ್ಸಾಪ್‌ನಲ್ಲಿ (WhatsApp) ಬಂದ ಲಗ್ನಪತ್ರಿಕೆ ಕ್ಲಿಕ್ ಮಾಡಿದ ದೆಹಲಿ ಸಮೀಪದ ಗುರುಗ್ರಾಮದ ವ್ಯಕ್ತಿಯೊಬ್ಬರು 97 ಸಾವಿರ ರು. ಕಳೆದುಕೊಂಡಿದ್ದಾರೆ.
ವಿಷ್ಣು ಗಾರ್ಡನ್ ನಿವಾಸಿ ವಿನೋದ್ ಕುಮಾರ್ ಅವರ ಮೊಬೈಲ್‌ಗೆ ವಾಟ್ಸಾಪ್‌ನಲ್ಲಿ ಸೆ.4ರಂದು ಅಪರಿಚಿತ ಸಂಖ್ಯೆ ಯಿಂದ ಮದುವೆ ಆಮಂತ್ರಣ ಪತ್ರಿಕೆ ಬಂದಿತು. ಯಾರ ಮದುವೆ ಆಹ್ವಾನ ಎಂಬ ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿದ ಕ್ಷಣವೇ ಅವರ ಫೋನ್ ಹ್ಯಾಕ್ ಆಗಿದೆ.
ಫೋನ್ ಸರಿಪಡಿಸುವಷ್ಟರಲ್ಲಿ 3 ಡಿಜಿಟಲ್ ವಹಿವಾಟು ನಡೆದಿದ್ದವು. ಸೈಬರ್ ವಂಚಕರು ಅವರ ಬ್ಯಾಂಕ್ ಖಾತೆಯಿಂದ 97 ಸಾವಿರ ರು. ಲಪಟಾಯಿಸಿದ್ದರು.
ಈ ಕುರಿತಂತೆ ಕುಮಾರ್ ಗುರುಗ್ರಾಮ ಪೊಲೀಸ್‌ಗೆ ದೂರು ನೀಡಿದರು.