ಬೆಂಗಳೂರು: ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM ಸಿದ್ದರಾಮಯ್ಯ) ಖಾಸಗಿ ಸುದ್ದಿವಾಹಿನಿ (Private channels) ವರದಿಗಾರರಿಗೆ ಪ್ರಶ್ನಿಸಿದರು.

ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು ಉತ್ಸವದ ಜ್ಯೋತಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಸಿಡುಕಿದ CM ಸಿದ್ದರಾಮಯ್ಯ#Cmsiddaramaiah pic.twitter.com/3JXqyGaell
— Harithalekhani (@harithalekhani) October 13, 2025
ಮುಖ್ಯಮಂತ್ರಿಗಳು ತಮ್ಮ ಸಂಪುಟ ಸದಸ್ಯರಿಗಾಗಿ ಇಂದು ಆಯೋಜಿಸಿರುವ ಭೋಜನಕೂಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು, ನನಗೆ ಅರ್ಥ ಆಗ್ತಾ ಇಲ್ಲ ಬಿಜೆಪಿ ಜೊತೆ ಸೇರಿಕೊಂಡು ಊಟಕ್ ಸೇರೋದು ಅಪರಾಧ ಅಂತ ಮಾಡ್ಕೊಂಡ್ ಇದ್ದೀರಲ್ಲ ಎಂದರು.
ಈ ವೇಳೆ ಆ ರೀತಿ ಅಲ್ಲ ಸರ್ ಎಂದ ಖಾಸಗಿ ಚಾನಲ್ ವರದಿಗಾರರ ಮತ್ತೆ ಯಾಕ್ ಈ ರೀತಿ ಪ್ರಶ್ನೆ ಕೇಳ್ತಾ ಇದ್ದೀರಿ ಎಂದು ಪ್ರಶ್ನಿಸಿದರು.