ಪಾಟ್ನಾ; ಬಿಹಾರ ಚುನಾವಣೆ (Bihar election) ದಿನಾಂಕ ಘೋಷಣೆ ಬೆನ್ನಲ್ಲೇ ಸಿಎಂ ನಿತೀಶ್ ಕುಮಾರ್ (Nitish Kumar) ಅವರಿಗೆ ಶಾಕ್ ಎದುರಾಗಿದ್ದು, ಜೆಡಿಯುನ ಹಿರಿಯ ನಾಯಕ ಮತ್ತು ನಿತೀಶ್ ಕುಮಾರ್ ಅವರಿಗೆ ಪರಮಾಪ್ತರಾಗಿದ್ದ ಜೈ ಕುಮಾರ್ ಸಿಂಗ್ (Jai Kumar Singh) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈಗಾಗಲೇ ಬಿಹಾರ ಚುನಾವಣೆಗೂ ಮುನ್ನವೇ ವಿರೋಧ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವೋಟ್ ಚೋರಿ (Vote Chori ಆರೋಪಿಸಿ ಇಡೀ ಬಿಹಾರ ರಾಜ್ಯದಲ್ಲಿ ಯಾತ್ರೆ ನಡೆಸುವ ಮೂಲಕ ಆಕ್ರಮಣಾಕಾರಿಯಾಗಿ ಮುಗಿಬಿದ್ದಿವೆ.
ಮತ್ತೊಂದೆಡೆ ಬಿಹಾರದ ರೋಡ್ತಾಸ್‌ನ ದಿನಾರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ, ನಿತೀಶ್ ಕುಮಾರ್ ಅವರಿಗೆ ಬಹಳಷ್ಟು ಜನ ಆತ್ಮೀಯರು ಕೈ ಕೊಟ್ಟು ಪಕ್ಷ ಬಿಟ್ಟು ಹೋದರು, ಜೀವನ ಪೂರ್ತಿ ಅವರ ಹಿಂದೆ ನಿಲ್ಲುವೆ, ನಿತೀಶ್ ಕುಮಾರ್ ನನ್ನ ಹೃದಯದಲ್ಲಿದ್ದಾರೆ, ಅವರೇ ನನ್ನ ಆದರ್ಶ ಎನ್ನುತ್ತಿದ್ದ ಜೈ ಕುಮಾರ್ ಸಿಂಗ್ ಪಕ್ಷವನ್ನು ತ್ಯಜಿಸಿರುವುದು, ಪಕ್ಷದ ಟಿಕೇಟ್ ಹಣವಂತರಿಗೆ ಮಾರಾಟವಾಗುತ್ತಿದೆ ಎಂದು ಆರೋಪಿಸಿರುವುದು ಜೆಡಿಯು ಪಕ್ಷಕ್ಕೆ ದೊಡ್ಡಮಟ್ಟದ ಹೊಡೆತವನ್ನು ನೀಡಿದೆ.
ಜೆಡಿಯು ಪಕ್ಷದಲ್ಲಿ ಆಂತರಿಕ ವಿಪ್ಲವ
ಪಕ್ಷಕ್ಕೆ ಸಲ್ಲಿಸಿದ ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತಾನಾಡಿರುವ ಜೈ ಕುಮಾರ್ ಸಿಂಗ್, ಜೆಡಿಯು ಪಕ್ಷದಲ್ಲಿ ಆಂತರಿಕ ವಿಪ್ಲವ ಸೃಷ್ಟಿಯಾಗಿದೆ. ಪ್ರಮುಖ ರಾಜಕೀಯ ನಿರ್ಧಾರ ಕೈಗೊಳ್ಳುವ ನಾಯಕತ್ವ ಕಣ್ಮರೆಯಾಗಿದೆ. ಪಕ್ಷದ ಸಾಕಷ್ಟು ವಿಚಾರಗಳನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗಮನಕ್ಕೆ ತರುತ್ತಿಲ್ಲ. ಹೀಗಾಗಿ ಜೆಡಿಯು ಗಂಭೀರ ಪರಿಣಾಮಗಳನ್ನು ಎದುರಿಸಲಿದೆ.
ನಿತೀಶ್ ಕುಮಾರ್ ಅವರು ಸರಿ ಇದ್ದಿದ್ದರೆ ಇಂದು ನಾ ಪಕ್ಷ ಬಿಡುವ ಸಂದರ್ಭ ಬರುತ್ತಿರಲಿಲ್ಲ. ನಿತೀಶ್ ಕುಮಾರ್ ಅವರು, ಜೈ ಕುಮಾರ್ ಸಂಕಷ್ಟ ಸಂದರ್ಭದಲ್ಲಿ ಇದ್ದೇನೆ ನಿನಗೆ ಟಿಕೆಟ್ ಕೊಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರೆ ನನ್ನ ಸಮುದಾಯಕ್ಕೆ ನಾ ಹೇಳುತ್ತಿದ್ದೆ ಅನೇಕ ಬಾರಿ ಶಾಸಕನಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ ನನಗೆ ಟಿಕೇಟ್ ಬೇಡ ಎಂದು.
ಒಂದು ವೇಳೆ ನನ್ನ ಕ್ಷೇತ್ರದ ಟಿಕೆಟ್ ಬಿಜೆಪಿಗೆ ನೀಡಿದ್ದರು ನಾ ಈ ಮುಂಚಿನ ಚುನಾವಣೆಯಲ್ಲಿ ಅವರಿಂದ ನೆರವಾಗಿದೆ. ಈ ಚುನಾವಣೆಯಲ್ಲಿ ಅವರಿಗೆ ಬಿಟ್ಟುಕೊಡುವೆ ಎಂದು ಹೆಮ್ಮೆಯಿಂದ ಕೇಳುತ್ತಿದ್ದೆ. ಆದರೆ ನನ್ನ ಕ್ಷೇತ್ರದ ಟಿಕೆಟ್ ರಾಷ್ಟ್ರೀಯ ಲೋಕ ಮೋರ್ಚಾಗೆ (RLM) ಬಿಟ್ಟುಕೊಡಲಾಗಿದೆ. ಆದರೆ ರಾಷ್ಟ್ರೀಯ ಲೋಕ ಮೋರ್ಚಾ ಅಭ್ಯರ್ಥಿಗೆ ಒಂದು ಪೈಸೆ ರಾಜಕೀಯ ತಿಳಿದಿಲ್ಲ. ಅವರತ್ರ ಹಣ ಇದೆ ಅಷ್ಟೇ.
ನಾ ಅಧಿಕಾರಕ್ಕಾಗಿ ಎಂದು ರಾಜಕೀಯ ಮಾಡಿಲ್ಲ, ಮೂರು ಬಾರಿ ಗೆದ್ದು, ನಾಲ್ಕು ಸಚಿವ ಸ್ಥಾನ ನಿಭಾಯಿಸಿದ್ದೇನೆ, ಆದರೆ ಆತ್ಮಾಭಿಮಾನವನ್ನು ಬಲಿಕೊಡಲು ಸಾಧ್ಯವಿಲ್ಲ.. ಹೀಗಾಗಿ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯ ಸನಿಹದಲ್ಲಿ ರಾಜಪೂತ ಸಮುದಾಯದ ಜೈ ಕುಮಾರ್ ಸಿಂಗ್ ಅವರ ಈ ನಡೆ ಎನ್‌ಡಿಎ ಮೈತ್ರಿಕೂಟಕ್ಕೆ ಡ್ಯಾಮೇಜ್ ಮಾಡುವ ಆತಂಕ ಎದುರಾಗಿದೆ.
ಆದರೆ ಈ ವಿಷಯದ ಬಗ್ಗೆ ಜೆಡಿಯುನ ಯಾವುದೇ ಹಿರಿಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.