ದೊಡ್ಡಬಳ್ಳಾಪುರ: ಗ್ರಾಮಿಣ ಉಪ ವಿಭಾಗ ವ್ಯಾಪ್ತಿಗೆ ಬರುವ ಕನಸವಾಡಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಅ.19 ರಂದು ಭಾನುವಾರ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ (Power Cut)
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮೀಣ ಉಪವಿಭಾಗದ ಎಇಇ ಮಂಜುನಾಥ್ ಮಾಹಿತಿ ನೀಡಿದ್ದು, ಕನಸವಾಡಿ ವಿದ್ಯುತ್ ಉಪ ಕೇಂದ್ರದ ಎಪ್-5 ಬಿಟಿಎಸ್ ಮಿಲ್ ( ಕೈಗಾರಿಕ), ಎಪ್-7 ಕನ್ನಮಂಗಲ ( ಕೃಷಿ) & ಎಪ್-09 ಪುಟ್ಟೇನಹಳ್ಳಿ ( ನಿರಂತರ) ಮಾರ್ಗಗಳ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಕುಸುಮ ಯೋಜನೆಯ ಸೌರ ಶಕ್ತಿ ವಿದ್ಯುದ್ದೀಕರಣ ಸ್ಥಾವರಗಳನ್ನು ನಿರ್ಮಿಸುವ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅ.19 ರಂದು ವಿದ್ಯುತ್ ಸರಬರಾಜುಗುತ್ತಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಬೆಳ್ಳಿಗೆ 10:00 ಘಂಟೆಯಿಂದ ಸಂಜೆ 6:00 ಘಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ, ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್,ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಎಇಇ ಮಂಜುನಾಥ್ ತಿಳಿಸಿದ್ದಾರೆ.
ಇದೀಗ ಬಂದ ಸುದ್ದಿ: ದೊಡ್ಡಬಳ್ಳಾಪುರ: ಅ.19 ರಂದು ವಿದ್ಯುತ್ ಅಬಾಧಿತ.. ಕಾಮಗಾರಿ ಅ.26ಕ್ಕೆ ಮುಂದೂಡಿಕೆ..!
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ಪುಟ್ಟೇನಹಳ್ಳಿ, ತಿಮ್ಮಸಂದ್ರ, ವಡಗೆರೆ, ದೊಡ್ಡ ವಡಗೆರೆ, ಚಿಕ್ಕ ವಡಗೆರೆ, ವಡಗೆರೆ ಕಾಲೋನಿ, ಬೆನಚಿನಕಟ್ಟೆ, ಕಮ್ಮಸಂದ್ರ ಕಮ್ಮಸಂದ್ರ ಕಾಲೋನಿ, ಕನ್ನಮಂಗಲ/ಗೇಟ್/ಗ್ರಾಮ/ಕಾಲೋನಿ, ರಾಮರಾಯನ ಪಾಳ್ಯ, ಯಲ್ಲದಹಳ್ಳಿ, ಕೇಂಜಿಗನಹಳ್ಳಿ, ಕುರಿತಿಮ್ಮಯ್ಯನಪಾಳ್ಯ, ನಾಗೇನಹಳ್ಳಿ, ಉದ್ದಿಚಿಕ್ಕನಹಳ್ಳಿ, ಬಿಟಿಎಸ್ ಮಿಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)