ಬೆಂಗಳೂರು: ಕರ್ನಾಟಕ ಬಿಜೆಪಿ ಕಾಂಗ್ರೆಸ್ ಜೊತೆ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿರುವ ಗಿರಾಕಿಗಳ ಕೈಗೆ ಸಿಕ್ಕಿದ್ದು, ರಾಜ್ಯಕ್ಕೆ ಬರುವ ಬಿಜೆಪಿ (BJP) ಉಸ್ತುವಾರಿಗಳು ವಿಜಯೇಂದ್ರನಿಂದ (Vijayendra) ಹಣ ಪಡೆದು ಪಕ್ಷವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಯತ್ನಾಳ್, ಸಚಿವ ಪ್ರಿಯಾಂಕ್ ಖರ್ಗೆ ಮಾತು ಕೇಳಿ ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧ ಮಾಡಿದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಇನ್ನೆರಡು ವರ್ಷ ಅಷ್ಟೇ ಇವರ ಆಟ ನಮ್ಮ ಸರ್ಕಾರ ಬರುತ್ತೆ. ಇವರ ಎಲ್ಲಾ ಹಗರಣ ಬಯಲು ಮಾಡುತ್ತೇವೆ.
ನಮ್ಮ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಏನು ಮಾಡಿಲ್ಲ. ದಿನಾ ರಾತ್ರಿ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರನೂ ಸೇರಿ ಸಿದ್ದರಾಮಯ್ಯ ಮನೇಲೆ ಇರ್ತಾರೆ
ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಕುರಿತು ವಿಜಯೇಂದ್ರ ಖಂಡಿಸಿರೋದ್ ನೋಡಿದ್ದೀರ. ತೀವ್ರವಾಗಿ ಖಂಡನೆ, ಉಗ್ರವಾಗಿ ಖಂಡಿಸುತ್ತೇನೆ ಎನ್ನುತ್ತಾರೆ ಇಷ್ಟು ಬಿಟ್ಟು ಇನ್ನೇನ್ ಮಾಡ್ತಾನೆ..? ಅಶೋಕ ಕೂಡ ಅಷ್ಟೇ. ಇಂತಹ ಅಡ್ಜೆಸ್ಟ್ಮೆಂಟ್‌ಗಳ ಕೈಗೆ ಬಿಜೆಪಿ ಸಿಕ್ಕು ಅದ್ವಾನ ಆಗಿದೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ವರಿಷ್ಠರು ಅಗರ್ವಾಲ್, ಪಗರ್ವಾಲ್ ಅವರನ್ನು ಬಿಟ್ಟು ಹಿರಿಯರ ಕಡೆ ನೋಡಲಿ, ರಾಜ್ಯ ಬಂದು ನಾವು ಹಮ್ ಬಹುತ್ ಸ್ಟ್ರಿಕ್ಟ್ ಹೈ, ಹಮ್ ಬಹುತ್ ಖಡಕ್ ಹೈ ಅಂತಾ ಬಿಲ್ಡಪ್ ಕೊಡ್ತಾರೆ, ಸುಡಿಗಾಡು ಹೈ..ಅಂತ ಹಣ ಕೊಟ್ಟರೆ ಬಿಜೆಪಿನ ವಿಜಯೇಂದ್ರಗೆ ಮಾರಿಕೊಂಡು ಹೋಗ್ತಾರೆ.
ಬಿಜೆಪಿಗೆ ಬರ್ತೀರಾ ಎಂಬ ಪ್ರಶ್ನೆಗೆ, ಯಡಿಯೂರಪ್ಪ ಕುಟುಂಬದಿಂದ, ಈ ಭ್ರಷ್ಟ ಕುಟುಂಬ ಹೋಗಬೇಕು. ಇವರು ದಿನಾ ರಾತ್ರಿ ಸಿದ್ದರಾಮಯ್ಯ ಮನೇಲ್ ಇರ್ತಾರೆ. ಸದನದಲ್ಲಿ ನಾವ್ ಪ್ರತಿಭಟನೆ ಧರಣಿ ಮಾಡ್ತಾ ಇದ್ದರೆ, ಡಿ.ಕೆ. ಶಿವಕುಮಾರ್ (D.K. Shivakumar) ಅತ್ರ 15 ಸಹಿ ಹಾಕಿಸಿದ್ದಾನೆ.
ಇಂತವರೆಲ್ಲಿ ಪಕ್ಷಕಟ್ಟುತ್ತಾರೆ..? ಪಕ್ಷ ಮಾರಿಕೊಂಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ನಾಯಕರು ಏಕೆ ಕಣ್ಣು ಮುಚ್ಚಿಕುಳಿತಿದ್ದಾರೋ ತಿಳಿದಿಲ್ಲ. ಯಡಿಯೂರಪ್ಪ ಏನ್ ಮಾಟ ಮಂತ್ರ ಮಾಡಿಸಿದ್ದಾರೋ ಗೊತ್ತಿಲ್ಲ. ಅವರಿಗೆ ಅಂತ ಚಟ ಜಾಸ್ತಿ ಇದೆ ಎಂದು ಕುಟುಕಿದರು.