ದೊಡ್ಡಬಳ್ಳಾಪುರ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದೊಡ್ಡಬಳ್ಳಾಪುರ ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್ ಎಸ್ ಎಸ್ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಏಡ್ಸ್/ ಹೆಚ್ಐವಿ ( AIDS / HIV ) ಕುರಿತಂತೆ ಜಾಗೃತಿ ಜಾಥಾವನ್ನು (Awareness rally) ಹಮ್ಮಿಕೊಳ್ಳಲಾಗಿತ್ತು.

ಪ್ರಾಂಶುಪಾಲರಾದ ಮಾಯಾ ಸಾರಂಗಪಾಣಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಸಮುದಾಯ ಏಡ್ಸ್‌ನ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅನಿವಾರ್ಯತೆ ಯಾಗಿದೆ ಎಂದು ತಿಳಿಸಿದರು.
ಜಾಗೃತಿ ಜಾಥವು ಕಾಲೇಜಿನ ಆವರಣದಿಂದ ಪ್ರಾರಂಭವಾಗಿ, ನಗರಸಭೆ ರಸ್ತೆ, ಮುಖಾಂತರ ಗಾಂಧಿ ಸರ್ಕಲ್ ತಲುಪಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರು ಸಾರ್ವಜನಿಕರಲ್ಲಿ ಏಡ್ಸ್/ ಹೆಚ್ಐವಿ ಅರಿವಿನ ಬಗ್ಗೆ ಮಾಹಿತಿಯನ್ನು ನೀಡಿ ಅಣಕು ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿದರು.
ನಂತರ ತಾಲ್ಲೂಕು ಸರ್ಕಲ್ ತಲುಪಿ ಕಾಲೇಜಿನಲ್ಲಿ ಮುಕ್ತಾಯವಾಯಿತು.
ಜಾತಾದಲ್ಲಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ. ಸುಷ್ಮಾ ಹೆಚ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಸಂತೋಷ, ಕನ್ನಡ ವಿಭಾಗದ ಮುಖ್ಯಸ್ಥ ಕೃಷ್ಣ ನಾಯಕ್, ರು, ಡಾ. ಜ್ಯೋತಿ ಬನ್ನಿಹಟ್ಟಿ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಗೋಮತಿ, ಅತಿಥಿ ಉಪನ್ಯಾಸಕಾರದ ಮಂಜುನಾಥ್, ವಾಣಿಜ್ಯ ಶಾಸ್ತ್ರ ವಿಭಾಗದ ಸೂಫಿಯಾ ತಾಜ್, ಅರ್ಥಶಾಸ್ತ್ರ ವಿಭಾಗದ ಹನುಮಂತರಾಯಪ್ಪ, ಗ್ರಂಥಪಾಲಕರಾದ ಮಹದೇವ, ನಳಿನರವರು ಹಾಜರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ರೆಡ್ ರಿಬ್ಬನ್ ಕ್ಲಬ್‌ನ ಸಂಯೋಜಕ ಡಾ. ವರುಣ್ ರಾಜ ಆಯೋಜಿಸಿದ್ದರು.