ದೊಡ್ಡಬಳ್ಳಾಪುರ: ಈಶ್ವರ ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರಾಜ ನಗರದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿನ ಪುನರ್ ನಿರ್ಮಾಣ ಕೈಗೊಂಡಿರುವ ಈಶ್ವರ ದೇವಾಲಯದಲ್ಲಿ (Eshwara Temple) ಮೂರು ದಿನಗಳ ಕಾಲ ಗಣೇಶ, ಪಾರ್ವತಿ ಸಮೇತ ಈಶ್ವರ ಕಾಲಭೈರವ ನೂತನ ಶಿಖರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಮತ್ತು ಬಸವೇಶ್ವರ, ಆಂಜನೇಯ, ಮಾಚೀಶ್ವರ, ನವಗ್ರಹ, ನಾಗ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಇಂದು (ಅ.25) ಸಂಜೆ 4-00 ಗಂಟೆಗೆ ಮಂಗಳವಾದ್ಯ ಸಮೇತ ಪೂರ್ಣಕುಂಭಗಳೊಡನೆ ಗಂಗಾಪೂಜೆ, ಆಲಯ ಪ್ರವೇಶ, ಮಹಾಗಣಪತಿ ಪೂಜಾ, ಶೈವ ಪುಣಣ್ಯಾಹ, ದೇವನಾಂದಿ ಪಂಚಗವ್ಯಾ ಪೂಜಾ, ಋತ್ವಿಗರಣ, ರಕ್ಷಾಬಂಧನ, ಅಸ್ತ್ರ ರಾಜಪೂಜಾ, ರಾಕ್ಷೆಜ್ಞ ಪೂಜಾ, ಅಂಕುರಾರೋಪಣ, ಕಳಶ ಸ್ಥಾಪನಾದಿ ಕಾರ್ಯ. ರಾತ್ರಿ 7-30 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
ಅ.26 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಮಹಾಗಣಪತಿ ಪೂಜಾ, ಧ್ವಜಾರೋಹಣ, ಶೈವಾಗ್ನಿ ಪ್ರತಿಷ್ಠಾ. ಮಹಾಹೋಮ, ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನೂತನ ಕಳಶ ಪ್ರತಿಷ್ಠಾಪನೆ, ವಿಗ್ರಹ ಧಾನ್ಯಾಧಿವಾಸ, ಶೈಯ್ಯಾಧಿವಾಸ. ರಾತ್ರಿ 7-30 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
ಅ.27 ರಂದು ಬೆಳಗಿನ ಜಾವ 4-30 ರಿಂದ 5-30 ಗಂಟಗೆ ಮಹಾಚಕ್ರ ಸ್ಥಾಪನೆ, ನವರತ್ನ ಪಂಚಲೋಹ ಸಮೇತ ವಿಗ್ರಹಗಳ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗುತ್ತದೆ. ನಂತರ ಬೆಳಗ್ಗೆ 9-00 ರಿಂದ 9-45 ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೇತ್ರೋಲನ, ಪೂರ್ಣಾಹುತಿ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಈ ವೇಳೆ ಶ್ರೀಗಳಿಗೆ ಪಾದಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.