ದೆಹಲಿ: ಮೊಂಥಾ ಚಂಡಮಾರುತ (Montha Cyclone) ಮಂಗಳವಾರ ಆಂಧ್ರ ಪ್ರದೇಶದ ತೀರಕ್ಕೆ ಅಪ್ಪಳಿಸಲಿದ್ದು, ರಾಜ್ಯದ 23 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಾಕಿನಾಡ ಬಳಿಯ ಮಚಲಿ ಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತ ಹಾದು ಹೋಗುವ ಸಾಧ್ಯತೆ ಇದೆ. ಒಡಿಶಾ ಮತ್ತು ತಮಿಳುನಾಡು ಕಡಲ ತೀರದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಬಂಗಾಳ ಕೊಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಲಾಗಿದೆ. ಇದೇ ವೇಳೆ ಕರ್ನಾಟಕದಲ್ಲಿ ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರಿದಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತವಾಗಿದ್ದು, ಒಡಿಶಾ ಕರಾವಳಿ ತೀರಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಚಂಡಮಾರುತವೂ ಗೋಪಾಲಪುರದಿಂದ ಸುಮಾರು 860 ಕಿ.ಮೀ ಮತ್ತು ಕಾಕಿನಾಡದಿಂದ 710 ಕಿ.ಮೀ ದೂರ ‘ದಲ್ಲಿ ಕೇಂದ್ರೀಕೃತವಾಗಿದೆ. ಈ ಚಂಡ ಮಾರುತವೂ ಅಕ್ಟೋಬರ್ 28ರಂದು ತೀವ್ರ ವಾಗುವ ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ ಮೊಂಥಾ ಚಂಡಮಾರುತವು ಒಡಿಶಾದ ಮೇಲೆ ನೇರ ಪರಿಣಾಮ ಬೀರುವ ನಿರೀಕ್ಷೆ ಯಿಲ್ಲದಿದ್ದರೂ, ಅಕ್ಟೋಬರ್ 29ರ ವರೆಗೆ ರಾಜ್ಯದ ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮಳೆ ಪರಿಣಾಮಗಳನ್ನು ತಗ್ಗಿಸುವ ಕುರಿತು ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ವಿಪತ್ತು ಪ್ರತಿಕ್ರಿಯೆ ಕಾರ್ಯವಿಧಾನ ವನ್ನು ಸಕ್ರಿಯಗೊಳಿಸಲಾಗಿದ್ದು, ಚಂಡಮಾ ರುತದ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಸಮಗ್ರ ಸನ್ನದ್ದತಾ ಯೋಜನೆ ರೂಪಿಸಲಾಗಿದೆ.
ದುರ್ಬಲ ಪ್ರದೇಶಗಳಲ್ಲಿರುವ ಜನರು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ವಿಶೇಷ ಪರಿಹಾರ ಆಯುಕ್ತರು ಜನರ ಸ್ಥಳಾಂತರಕ್ಕೆ 128 ತಂಡಗಳನ್ನು ನಿಯೋಜಿಸಿದೆ.
ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾ ಗುತ್ತಿದ್ದು, ಎಚ್ಚರಿಕೆ ನೀಡಲಾಗಿರುವ 9 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ 9 ಜಿಲ್ಲೆಗಳಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಉದ್ಯೋಗಿಗಳ ರಜೆ ರದ್ದು ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.