ಪಾಟ್ನಾ: ಪಕೋಡಾ ಮಾರುವುದು ಎಂದು ಉದ್ಯೋಗವೇ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಈಗ ನಮ್ಮ ಸರ್ಕಾರದ ಕಡಿಮೆ ದರದಲ್ಲಿ ಸಿಗುವ ಇಂಟರ್ನೆಟ್ ಬಳಸಿ ಇನ್ಸ್ಟಾಗ್ರಾಮ್ (Instagram) ಮೂಲಕ ರೀಲ್ಸ್ (Reels) ಮಾಡಿ ಯುವ ಸಮುದಾಯ ಹಣಗಳಿಸುತ್ತಿದ್ದಾರೆ ಎಂದಿರುವುದು ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಹೌದು ಬಿಹಾರ ಚುನಾವಣೆಗೆ (Bihar election) ದಿನಗಣನೆ ಆರಂಭವಾದಂತೆ ಎನ್‌ಡಿಎ ಹಾಗೂ ಇಂಡಿಯಾ ಬಣದ ನಡುವಿನ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ.
ಕುಟುಂಬ ರಾಜಕಾರಣದ ಕುರಿತು ಅಮಿತ್ ಶಾ ವಾಗ್ದಾಳಿ ನಡೆಸಿದ್ದರೆ, ಕೇಂದ್ರ ಸರ್ಕಾರ ಉದ್ಯೋಗ ನೀಡದೆ ಇನ್ಸ್ಟಾಗ್ರಾಮ್ ಮೂಲಕ ರೀಲ್ಸ್ ಮಾಡಿ ಹಣ ಸಂಪಾದನೆ ಮಾಡಬಹುದು ಎನ್ನುವ ಪ್ರಧಾನಿ ಮೋದಿ ಅವರು ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
A perfect answer was given to low IQ Narendra Modi by Rahul Gandhi Ji…
— Shantanu (@shaandelhite) October 29, 2025
“Modi wants the youth to waste their time on reels so that they would not be asking jobs.”
Speeches of Rahul Gandhi and Modi on this issue makes it clear that Modi has no understanding compared to RG. pic.twitter.com/cZLLMANJnl
ಬಿಹಾರದ ಮತದಾರರು ನರೇಂದ್ರ ಮೋದಿ ಅವರ ನಾಟಕಕ್ಕೆ ಮರುಳಾಗಬಾರದು. ನಿಮ್ಮ ಓಟಿಗಾಗಿ ಅವರು ವೇದಿಕೆ ಮೇಲೆ ನೃತ್ಯ ಮಾಡಲೂ ಸಹ ಸಿದ್ದರಾಗಿರುತ್ತಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಣಕವಾಡಿದ್ದಾರೆ.
ಬಿಹಾರ ಚುನಾವಣಾ ಕಣದಲ್ಲಿನ ತಮ್ಮ ಮೊದಲ ಪ್ರಚಾರವನ್ನು ಮುಜಾಫರ್‌ಪುರ ಜಿಲ್ಲೆಯಲ್ಲಿ ಬುಧವಾರ ಆರಂಭಿಸಿದ ರಾಹುಲ್ ಗಾಂಧಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಖವನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ಬಿಹಾರದಲ್ಲಿನ ಎನ್‌ಡಿಎ ಮೈತ್ರಿಕೂಟ ಸರಕಾರವನ್ನು ‘ರಿಮೋಟ್ ಕಂಟ್ರೋಲ್ ಮೂಲಕ’ ನಡೆಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಸರಕಾರ ‘ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ’. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ನರೇಂದ್ರ ಮೋದಿ ಸರಕಾರ ಜಾತಿ ಗಣತಿಗೆ ಒಪ್ಪಿಕೊಂಡಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ10 ವರ್ಷದಿಂದ ಯಮುನಾ ನದಿ ಸ್ವಚ್ಚಗೊಳಿಸದ ಸರ್ಕಾರ, ಪೈಪ್ ಮೂಲಕ ಗಂಗಾ ನದಿಯನ್ನು ತಂದು, ಜನರನ್ನು ದಾರಿತಪ್ಪಿಸಲು ಮುಂದಾಗಿದೆ.
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮೋದಿ ಕಾರ್ಯಕ್ರಮ ರದ್ದಾಗಿದೆ. ದೇಶದಲ್ಲಿ ಎರಡು ಬಗೆಯ ಭಾರತ ಉದಯಿಸಿವೆ. ಒಂದು ಸಾಮಾನ್ಯ ಜನರಿಗೆ ಸೇರಿದ್ದಾಗಿದ್ದರೆ, ಇನ್ನೊಂದು 5-10 ಶತಕೋಟ್ಯಾಧಿಪತಿಗಳಿಗೆ ಸೇರಿದ ಭಾರತವಾಗಿದೆ.
ಬಿಹಾರದಂತಹ ರಾಜ್ಯ ಬಡತನದಲ್ಲಿ ಬಳಲುತ್ತಿರುವುದಕ್ಕೆ ಇದೇ ಕಾರಣವಾಗಿದೆ. ನಿಜವಾಗಿ ಬಿಹಾರದಲ್ಲಿ ಅಗಾಧ ಸಾಮರ್ಥ್ಯವಿದೆ. ಆದರೆ, ಅದನ್ನು ಇನ್ನೂ ಬಳಸಿಕೊಳ್ಳಲಾಗಿಲ್ಲ ಎಂದು ರಾಹುಲ್ ವಿಷಾದಿಸಿದರು.
ಬಿಹಾರದ ಜನರು ದುಬೈ, ಮಾರಿಷಸ್, ಸೀಶೆಲ್ಸ್ ಮತ್ತು ಅಮೆರಿಕ ಮೊದಲಾದೆಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಹಾರದ ಜನತೆ ಅವರ ಸಂಪೂರ್ಣ ಸಾಮರ್ಥ್ಯ ವನ್ನು ಬಳಸಿಕೊಳ್ಳಬೇಕು ಎಂದು ಹುರಿದುಂಬಿಸಿದರು.
‘ಜನರಿಗೆ ಅಗ್ಗವಾಗಿ ಡೇಟಾ ಲಭ್ಯವಾಗುವಂತೆ ಮಾಡಿರುವುದಾಗಿ ಮೋದಿ ಹೆಮ್ಮೆಪಡುತ್ತಾರೆ. ಆದರೆ, ದೂರಸಂಪರ್ಕ ವಲಯದಲ್ಲಿ ಒಂದು ವ್ಯವಹಾರ ಸಂಸ್ಥೆಯ ಏಕಸ್ವಾಮ್ಯಕ್ಕೆ ಅವಕಾಶ ನೀಡಲಾಗಿದೆ ಎಂಬ ಅಂಶವನ್ನು ಅವರು ಮರೆಮಾಡುತ್ತಾರೆ ಎಂದು ಟೀಕಿಸಿದರು.