ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ(TAPMCS) ಭಾನುವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಶೇ.93.98ರಷ್ಟು ಮತದಾನ ನಡೆದಿದೆ.
‘ಬಿ’ ತರಗತಿಯಿಂದ ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು 5 ಜನ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
‘ಎ’ ತರಗತಿಯ ಫಲಿತಾಂಶ ನ್ಯಾಯಾಲಯ ಆದೇಶದ ನಂತರ ಪ್ರಕಟಿಸುವುದಾಗಿ ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 5 ಜನ ಅಭ್ಯರ್ಥಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆಯಾದರೂ ಅದರಲ್ಲಿ ಒಬ್ಬರು NDA ಮೈತ್ರಿ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ರೈತರು ಉತ್ಸಾಹದಿಂದಲೇ ಮತಚಲಾವಣೆ ಮಾಡಿದರು.
ಸಂಜೆ 6 ಗಂಟೆಯ ನಂತರ ಮತಗಳ ಎಣಿಕೆ ಪ್ರಾರಂಭಿಸಲಾಯಿತು. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿರ್ವಹಣೆ ಮಾಡುವ ಸಲುವಾಗಿಯೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ಗೊಂದಲುಗಳು ಉಂಟಾಗಿಲ್ಲ.
ಮತ ಚಲಾವಣೆಗೆ ಕಾದು ನಿಲ್ಲುವುದನ್ನು ತಪ್ಪಿಸಲು 12 ಕೊಠಡಿಗಳ ಮತಚಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೊಠಡಿಯಲ್ಲೂ ಏಕ ಕಾಲಕ್ಕೆ 8 ಜನರು ಪ್ರತ್ಯೇಕವಾಗಿ ಮತಪತ್ರಗಳ ಮೂಲಕ ಗುಪ್ತ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿತ್ತು.
ಮತದಾನ ನಡೆದ ಸರ್ಕಾರಿ ಕಾಲೇಜಿನ ಸುತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೆಂಡಾಲ್ಗಳನ್ನು ಹಾಕಿಕೊಂಡು ಮತಯಾಚನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಟಿಎಪಿಎಂಸಿಎಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಧಾನ ಸಭಾ ಚುನಾವಣ ಮಾದರಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಮತಗಟ್ಟೆ ಸಮೀಪವೇ ಇದ್ದು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.
‘ಎ’ತರಗತಿ ಫಲಿತಾಂಶಕ್ಕೆ ತಡೆ
ದೊಡ್ಡಬಳ್ಳಾಪುರ ತಾಲ್ಲೂಕಿನ 20 ವಿಎಸ್ಎಸ್ಎನ್ಗಳ ಪ್ರತಿನಿಧಿಗಳಾಗಿ 5 ಜನ ನಿರ್ದೆಶಕ ಸ್ಥಾನಕ್ಕೆ 9 ಜನ ಸ್ಪರ್ಧಿಸಿದ್ದರು. ಇದರಲ್ಲಿ 2 ವಿಎಸ್ಎಸ್ಎನ್ಗಳ ಪ್ರತಿನಿಧಿಗಳು ಹೈಕೋರ್ಟ್ ಮೂಲಕ ಮತಚಲಾಯಿಸುವ ಹಕ್ಕು ಪಡೆದು ಭಾನುವಾರ ಮತಚಲಾಯಿಸಿದ್ದರು.
ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದ್ದು, ನ್ಯಾಯಾಲಯದ ತೀರ್ಪಿನ ನಂತರ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ.
‘ಎ’ ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದಿರುವ ಮತಗಳು
ಅಪ್ಪಣ್ಣಪ್ಪ: 7
ಕೆ.ಎಂ.ಅಂಬರೀಶ್; 10
ಎಸ್.ಬಿ.ಕೆಂಪೇಗೌಡ; 9
ಎಂ.ಗೋವಿಂದರಾಜು ; 11+2
ಎನ್.ಜಗನ್ನಾಥ್; 12+2
ಜೆ.ವೈ.ಮಲ್ಲಪ್ಪ; 7
ಎಂ.ವೆಂಕಟೇಶ್; 12+2
ಬಿ.ಎನ್.ಶ್ರೀನಿವಾಸಮೂರ್ತಿ; 9+2
ಡಿ.ಸಿದ್ದರಾಮಯ್ಯ; 13+2
‘ಬಿ’ ತರಗತಿಯಿಂದ ಆಯ್ಕೆಯಾದ ಅಭ್ಯರ್ಥಿಗಳು ಪಡೆದ ಮತ
ಪುರುಷೋತ್ತಮ; 2,602,
ವಿಶ್ವಾಸ್ಹನುಮಂತೇಗೌಡ; 2,184
ಎಂ.ಆನಂದ; 2338
ಎ.ರಾಮಾಂಜಿನಪ್ಪ; 1876
ಲಕ್ಷ್ಮೀ ನಾಗೇಶ್; 2,176
ಚಂದ್ರಕಲಾ ಮಂಜುನಾಥ್; 1872
ವಿ.ಎಸ್.ರಮೇಶ್; 2,544
ಜಿ.ಕೆಂಪೇಗೌಡ; 2,295.