ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ (Karnataka Rajyotsava) ಹಿನ್ನೆಲೆ ನಗರದ ನಮ್ಮ ಮೆಟ್ರೋದ (Metro) ಹಸಿರು ಮಾರ್ಗದಲ್ಲಿ ಕರ್ನಾಟಕ ಬಾವುಟ ಹಾಗೂ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ನ.1 ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ನಮ್ಮ ಮೆಟ್ರೋದ ಹಸಿರು ಮಾರ್ಗ ದಲ್ಲಿ ರೈಲೊಂದರ ಮೇಲೆ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳು ಕಂಡು ಬಂದಿತ್ತು.
Bengaluru: On Karnataka Rajyotsava (Nov 1), a Namma Metro Green Line train was wrapped with images of late Puneeth Rajkumar, Kannada flag colours, and slogans 'Siri Kannadam Gelge' & 'Siri Kannadam Baalge'. A 'Gandhada Gudi' poster was also added @OfficialBMRCL pic.twitter.com/Vw3fO4ajLk
— ChristinMathewPhilip (@ChristinMP_) November 2, 2025
ಮೆಟ್ರೋ ಬೋಗಿಗಳ ಮೇಲೆ ಪುನೀತ್ ರಾಜ್ಕುಮಾರ್ ಭಾವಚಿತ್ರ, ಕನ್ನಡ ಬಾವುಟ, ಸಿರಿಗನ್ನಡಂ ಗೆಲ್ವೆ, ಸಿರಿಗನ್ನಡಂ ಬಾಳೆ ಎಂಬ ಘೋಷವಾಕ್ಯಗಳನ್ನು ಬರೆಯಲಾಗಿದೆ. ಅಲ್ಲದೇ ಗಂಧದಗುಡಿ ಚಿತ್ರದ ಪೋಸ್ಟರ್ ಕೂಡ ಅಂಟಿಸಲಾಗಿತ್ತು.
ಪೀಣ್ಯಾದ ಡಿಪೋದಲ್ಲಿ ಮುದ್ರಾ ವೆಂಚರ್ಸ್ ಹಾಗೂ ಲೋಕೇಶ್ ಔಟ್ ಡೋರ್‌ನವರು ಈ ಅದ್ಭುತ ಹೊರಾಂಗಣ ಡಿಸೈನ್ ಮಾಡಿದ್ದು, ನಮ್ಮ ಮೆಟ್ರೋದೊಂದಿಗೆ ಜಾಹೀರಾತು ಹಕ್ಕುಗಳಿಗಾಗಿ ಈ ಎರಡು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.