ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಸರ್ಕಾರಿ ತಾಯಿ ಮಗು ಆಸ್ಪತ್ರೆಗೆ (Government Hospital) ಎಲ್& ಟಿ (L&T)ಸಂಸ್ಥೆಯಿಂದ ತನ್ನ ಸಿಎಸ್ಆರ್ (CSR) ಅನುದಾನದಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ 2 ವಾಷಿಂಗ್ ಮಷೀನ್ ಮತ್ತು ಡ್ರೈಯರ್ ಅನ್ನು ನೀಡಲಾಗಿದೆ.
ಇಂದು ನಗರದ ಸರ್ಕಾರಿ ತಾಯಿ ಮಗು ಆಸ್ಪತ್ರೆ ಆವರಣದಲ್ಲಿ ನೂತನ ವಾಷಿಂಗ್ ಮಷೀನ್ ಮತ್ತು ಡ್ರೈಯರ್ಗಳಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.
ಈ ವೇಳೆ ಎಲ್ & ಟಿ ಯೂನಿಟ್ ಮುಖ್ಯಸ್ಥ ಅಜಿತ್ ಕುಮಾರ್ ಕೆ., ಯೋಜನಾ ಮುಖ್ಯಸ್ಥ ಹರ್ಷ ಹೈತಾಲ್, ಮಾನವ ಸಂಪನ್ಮೂಲ ಮುಖ್ಯಸ್ಥ ಸತೀಶ್ ಚಂದ್ರ ನಿರ್ವಹಣಾ ಮುಖ್ಯಸ್ಥ ಎಂ.ಪಿ. ಮಂಜುನಾಥ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್, ವೈದ್ಯರಾದ ಡಾ.ಮಂಜುನಾಥ್ ಮತ್ತಿತರರಿದ್ದರು.