ಬೆಂಗಳೂರು: ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರಾದಾಗ, ರೈತರ ಪರವಾಗಿ ಯಾರು ನಿಲ್ಲುತ್ತಾರೆ? ನಮಗೆ ಆಹಾರ ನೀಡುವ ಅನ್ನದಾತರನ್ನ ರಕ್ಷಿಸಲು ಒಗ್ಗೂಡೋಣ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ 6ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ FRP ಅನ್ನು ಖಚಿತಪಡಿಸಿದೆ. ಮಹಾರಾಷ್ಟ್ರ ಸರ್ಕಾರ ₹3,550/ಟನ್‌ಗೆ ನಿಗದಿಪಡಿಸಿದೆ. ಸ್ವಯಂ ಘೋಷಿತ “ರೈತರ ಚಾಂಪಿಯನ್” ಎಂದು ಕರೆದುಕೊಳ್ಳುವ ಕಾಂಗ್ರೆಸ್ ಸರ್ಕಾರವ ಬೆಲೆಯನ್ನು ನಿಗದಿಪಡಿಸಿಲ್ಲ. ಈ ಕೂಡಲೇ ಕಬ್ಬು ಬೆಳೆಗಾರರ ಬೇಡಿಕೆಗಳನ್ನ ಈಡೇರಿಸುವಂತೆ ನಿಖಿಲ್ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದೆ.
— Nikhil Kumar (@Nikhil_Kumar_k) November 4, 2025
ಕೇಂದ್ರ ಸರ್ಕಾರ FRP ಅನ್ನು ಖಚಿತಪಡಿಸಿದೆ. ಮಹಾರಾಷ್ಟ್ರ ಸರ್ಕಾರ ₹3,550/ಟನ್‌ಗೆ ನಿಗದಿಪಡಿಸಿದೆ.
ಸ್ವಯಂ ಘೋಷಿತ "ರೈತರ ಚಾಂಪಿಯನ್" ಎಂದು ಕರೆದುಕೊಳ್ಳುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬೆಲೆಯನ್ನು ನಿಗದಿಪಡಿಸಿಲ್ಲ.
ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ… pic.twitter.com/AHeIgCIjG0
ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರಾದಾಗ ರೈತರ ಪರವಾಗಿ ಯಾರು ನಿಲ್ಲುತ್ತಾರೆ? ನಮಗೆ ಆಹಾರ ನೀಡುವ ಅನ್ನದಾತರನ್ನ ರಕ್ಷಿಸಲು ಒಗ್ಗೂಡೋಣ. ಎಲ್ಲಾ ಸಕ್ಕರೆ ಗಿರಣಿ ಮಾಲೀಕರು ರೈತರೊಂದಿಗೆ ನಿಂತು ನ್ಯಾಯಯುತ ಬೆಲೆಯನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.