Doddaballapur wage weaver workers' meeting; What was the solution without warning?

ದೊಡ್ಡಬಳ್ಳಾಪುರ ಕೂಲಿ ನೇಕಾರ ಕಾರ್ಮಿಕರ ಸಭೆ; ವಾರ್ನಿಂಗ್ ಅಲ್ಲದೆ ದೊರೆತ ಪರಿಹಾರವೇನು..?

ಕೆ.ಎಂ.ಸಂತೋಷ್, ಆರೂಢಿ: ದೊಡ್ಡಬಳ್ಳಾಪುರ ನಗರದ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ಸೋಮವಾರ ಹೊರ ರಾಜ್ಯಗಳ ವಲಸೆ ಕಾರ್ಮಿಕರ ಹಾವಳಿ ತಪ್ಪಿಸಲು ಸ್ಥಳೀಯರ ಬದುಕನ್ನು ರಕ್ಷಿಸಲು ನೊಂದ ಕೂಲಿ ನೇಕಾರ ಕಾರ್ಮಿಕರ ಹೋರಾಟ ಸಮಿತಿಯಿಂದ ಸಭೆ (Wage weaver workers’ meeting) ನಡೆಸಲಾಗಿದೆ.

ಈ ವೇಳೆ ರಾಜಕೀಯ ಪಕ್ಷಗಳು, ಪೊಲೀಸ್ ಇಲಾಖೆಯೇ ಗಾಬರಿ ಬೀಳುವಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಕೂಲಿ ನೇಕಾರ ಕಾರ್ಮಿಕರು ಭಾಗವಹಿಸಿದ್ದು ಅಚ್ಚರಿಗೀಡುಮಾಡಿತ್ತಾದ್ರೂ ವೇದಿಕೆಯಲ್ಲಿ ಅವರ ಹಿರಿಯರಿಗೆ ಸ್ಥಾನ ದೊರಕಲಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ.

ಪರಿಹಾರ..?!

ಈ ಸಭೆಯ ಮೂಲ ಉದ್ದೇಶ ಮೊದಲಿಗೆ ಹೇಳಿದಂತೆ ಹೊರ ರಾಜ್ಯಗಳ ವಲಸೆ ಕಾರ್ಮಿಕರ ಹಾವಳಿ ತಪ್ಪಿಸಲು ಸ್ಥಳೀಯರ ಬದುಕನ್ನು ರಕ್ಷಿಸಬೇಕೆಂಬುದಾಗಿತ್ತು. ಆದರೆ ಸಭೆಯ ಆರಂಭದಲ್ಲಿ ಇದ್ದ ಉತ್ಸಾಹ, ಜೈಕಾರ, ಚಪ್ಪಾಳೆ ಸಭೆ ಆರಂಭವಾದ ಕೆಲವೇ ಸಮಯದಲ್ಲಿ ನಿರುತ್ಸಾಹಕ್ಕೆ ಕಾರಣವಾಯಿತು ಎನ್ನಲಾಗಿದ್ದು, ಸಭೆಯಲ್ಲಿ ಸ್ಥಳೀಯ ಕೂಲಿ ನೇಕಾರ ಕಾರ್ಮಿಕರಿಗೆ ಯಾವುದೇ ಪರಿಹಾರ ಸಿಗಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಮಾಲೀಕರೇ ಹೊಣೆ

ಇನ್ನೂ ಸಭೆಯಲ್ಲಿ ನಡೆದ ವಿಚಾರಗಳ ಕುರಿತು ಗಮನಿಸುವುದಾದರೆ, ಡಿವೈಎಸ್ಪಿ ರವಿ ಅವರು ಮಾತನಾಡಿ, ನೇಕಾರಿಕೆ ಸೇರಿದಂತೆ ಕೈಗಾರಿಕೆಗಳಿಗೆ ಯಾವುದೇ ರೀತಿಯ ಉದ್ಯೋಗಕ್ಕಾಗಿ ಇಲ್ಲಿಗೆ ಹೊರ ರಾಜ್ಯದವರು ಬಂದಾಗ ಮಾಲೀಕರು ಸ್ಥಳೀಯ ಪೊಲೀಸರಿಗೆ ಅಗತ್ಯ ದಾಖಲೆಗಳ ಸಮೇತ ಮಾಹಿತಿ ನೀಡಿದ ನಂತರವೇ ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಬೇಕು. ಮಾಹಿತಿ ನೀಡದೇ ಇದ್ದರೆ ಯಾವುದೇ ರೀತಿಯ ತೊಂದರೆಗಳು ಉಂಟಾದ ಸಂದರ್ಭದಲ್ಲಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಸಂವಿಧಾನವೇ ಅವಕಾಶ ನೀಡಿದೆ

ಹೊರ ದೇಶದವರು ಇಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದರೆ ಕ್ರಮ ಕೈಗೊಳ್ಳಲು ಕಾನೂನು ಇದೆ. ಆದರೆ ನಮ್ಮ ದೇಶದ ಯಾವುದೇ ರಾಜ್ಯದ ಪ್ರಜೆ ಯಾವ ರಾಜ್ಯದಲ್ಲಿ ಬೇಕಾದರು ನೆಲೆಸಿ ಉದ್ಯೋಗ ಕಂಡುಕೊಳ್ಳಲು ಸಂವಿಧಾನವೇ ಅವಕಾಶ ನೀಡಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ಉದ್ಯೋಗದ ಕೊರತೆ, ಬಡತನ ಇರುವ ಕಾರಣಕ್ಕೆ ಇಲ್ಲಿಗೆ ಉದ್ಯೋಗ ಹುಡುಕುತ್ತ ಬರುತ್ತಿದ್ದಾರೆ. ಅಗತ್ಯ ದಾಖಲೆ, ಮಾಹಿತಿ ನೀಡಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ, ಅಶಾಂತಿಗೆ ಕಾರಣವಾಗದೆ ಉದ್ಯೋಗ ಮಾಡಿಕೊಳ್ಳುವವರ ವಿರುದ್ದ ಕ್ರಮಕೈಗೊಳ್ಳಲು ಸಾಧ್ಯ ಇಲ್ಲ.

ವಾರ್ನಿಂಗ್

ಹೊರ ರಾಜ್ಯದವರು ಎನ್ನುವ ಕಾರಣಕ್ಕೆ ಅವರ ವಿರುದ್ಧ ದೌರ್ಜನ್ಯ ನಡೆಸಿದರೆ ಕಾನೂನು ಕ್ರಮ ಅನಿವಾರ್ಯ. ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ ಎನ್ನುವ ಸಮಸ್ಯೆಯನ್ನು ಮುಖಂಡರು ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ನೇಕಾರ ಮುಖಂಡರ ಸಭೆ ನಡೆಸಿ ಹೊರ ರಾಜ್ಯಗಳಿಂದ ಬಂದಿರುವರ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆಂದು ಪ್ರಜಾವಾಣಿ ದಿನಪತ್ರಿಕೆಯ ಬೆಂಗಳೂರು ಗ್ರಾಮಾಂತರ ಪುಟದಲ್ಲಿ ವರದಿಯಾಗಿದೆ.

ಹೊರ ರಾಜ್ಯದವರಿಗೆ ನೋಂದಣಿಯಿಲ್ಲ..!

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜವಳಿ ಇಲಾಖೆ ಉಪನಿರ್ದೇಶಕಿ ಸೌಮ್ಯ ಮಾತನಾಡಿ, ನೇಕಾರ ಸಮ್ಮಾನ್ ಯೋಜನೆಯಲ್ಲಿ ಹೊರ ರಾಜ್ಯದವರು ನೋಂದಣಿ ಮಾಡಿಕೊಳ್ಳಲು ಅವಕಾಶ ಇಲ್ಲ.

ಯಾವುದೇ ಕಂಪನಿ ಅಥವಾ ಕೈಗಾರಿಕೆಯಲ್ಲಿ ಶೇ 85ರಷ್ಟು ಉದ್ಯೋಗನ್ನು ಸ್ಥಳೀಯರಿಗೆ ನೀಡಬೇಕು. ಇಲ್ಲವಾದರೆ ಸರ್ಕಾರದ ಆರ್ಥಿಕ ಸಹಾಯಗಳು ದೊರೆಯುದಿಲ್ಲ.

ಸ್ಥಳೀಯರ ಶಾಸಕರ ಅಧ್ಯಕ್ಷತೆಯಲ್ಲಿ ನೇಕಾರ ಮುಖಂಡರು ಸಭೆಯನ್ನು ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದರೆನ್ನಲಾಗಿದೆ.

ಸೂಕ್ಷ್ಮ ವಿಚಾರ

ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಯಾವುದೇ ನೇಕಾರ ಕೂಲಿ ಕಾರ್ಮಿಕರಿಗೆ ಉದ್ಯೋಗದ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜವಳಿ ಇಲಾಖೆಯ ಮೇಲಿದೆ. ನೇಕಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಇದು ಸೂಕ್ಷ್ಮ ವಿಚಾರವಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ನೇಕಾರಿಕೆ ಮಾಲೀಕರು, ಕಾರ್ಮಿಕರ ಸಭೆ ನಡೆಸಲಾಗುವುದು ಎಂದಿದ್ದಾರೆಂದು ವರದಿಯಾಗಿದೆ.

ಇನ್ನೂ ಸಭೆಯಲ್ಲಿ ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಕನ್ನಡಪರ ಸಂಘಟನೆಗಳ, ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

ಆಕ್ಷೇಪ

ಆದರೆ ಈ ಸಭೆಯ ಮೂಲ ಉದ್ದೇಶ ಅನ್ಯ ರಾಜ್ಯದವರಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಆಕ್ಷೇಪ. ಆದರೆ ಸಭೆಯಲ್ಲಿ ಸ್ಥಳೀಯರು ಸೋಮಾರಿಗಳು, ಕೆಲಸ ಮಾಡಲ್ಲ, ಪದೇ ಪದೇ ಟೀ ಕುಡಿಯಲು ಹೋಗ್ತಾರೆ ಎಂಬಂತೆ ಮಾತಾಡಿದ್ದಾರೆ ಎಂಬ ಆಕ್ಷೇಪ ತೀವ್ರವಾಗಿದೆ.

ವಿಶ್ವಗುರು ಭಾರತ

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದಲ್ಲಿ ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ ಎಂಬುದು ಗೋದಿ ಮೀಡಿಯಾಗಳ ವರದಿ ಎಂದು ವಿರೋಧ ಪಕ್ಷಗಳ ಬೆಂಬಲಿಗರ ಆಕ್ಷೇಪ.

ಜೊತೆಗೆ ಭಾರತ ವಿಶ್ವ ಗುರುವಾಗುವಾಗ ಉತ್ತರ ಭಾರತೀಯರು ದಕ್ಷಿಣ ಭಾರತದ ರಾಜ್ಯಗಳಿಗೆ ಬಂದು ಕಡಿಮೆ ಸಂಬಳಕ್ಕೆ ಉದ್ಯೋಗಕ್ಕೆ ಸೇರಿದರೆ, ಇಲ್ಲಿನ ಸ್ಥಳೀಯರ ಪರಿಸ್ಥಿತಿ ಏನು..? ಉತ್ತರ ಭಾರತ ಅಭಿವೃದ್ಧಿ ಆಗಿಲ್ಲವೇ..? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ.

ಶಿವಶಂಕರ್ ಪ್ರಶ್ನೆ..?

ಅಲ್ಲದೆ ದೊಡ್ಡಬಳ್ಳಾಪುರ ನಗರಸಭೆ ಸದಸ್ಯ ಹೆಚ್.ಎಸ್. ಶಿವಶಂಕರ್ (ಶಂಕ್ರಿ) ಅವರು, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಖಾತೆಯಲ್ಲಿ ಸರಣಿ ಪ್ರಶ್ನೆ ಮಾಡಿದ್ದು, ಸಭೆಯ ಮೊದಲಿಗೆ ಅವರ ಪ್ರಶ್ನೆ ಆಕ್ಷೇಪಕ್ಕೆ ಕಾರಣವಾದರೂ, ಬಳಿಕ ಸಭೆಯಿಂದ ಏನು ಆಗಿಲ್ಲ ನೀವಾದ್ರೂ (ನಿಮ್ಮ ಸರ್ಕಾರ) ಮಾಡಿ ಎಂಬಂತೆ ನೇಕಾರಿಕೆ ಕೂಲಿ ಕಾರ್ಮಿಕರು ಕಾಮೆಂಟ್ ಮಾಡುತ್ತಿದ್ದಾರೆ.

ಮೂಲ ಸಮಸ್ಯೆ

ನೇಕಾರಿಕೆ ಮೂಲ ಸಮಸ್ಯೆ ರೇಪಿಯಾರ್ ಮಗ್ಗದಿಂದ ಗುಡಿ ಕಾರ್ಮಿಕರ ವ್ಯಾಪ್ತಿಗೆ ಬರುವವರಿಗೆ ಸಮಸ್ಯೆ ಎದುರಾಗುತ್ತಿದೆ ಎಂಬುದು ಅನೇಕರ ಅಭಿಪ್ರಾಯ ಕೇಳಿಬಂದಿದೆ.

ಮೂಲಗಳ ಅನ್ವಯ ರೇಪಿಯಾರ್ ಮಗ್ಗದಲ್ಲಿ ಗುಡಿ ಕಾರ್ಮಿಕರ ಸೀರೆಗಳನ್ನು ನೇಯುವಂತಿಲ್ಲ. ಏಕೆಂದರೆ ಇದರಲ್ಲಿ ರಪ್ತು ಮಾಡಲಾಗುವ ಉಡುಪುಗಳನ್ನು ಮಾತ್ರ ನೇಯಬೇಕಿದೆ. ಇದು ಇಂಡಸ್ಟ್ರಿಯಲ್ ವ್ಯಾಪ್ತಿಗೆ ಬರುತ್ತದೆ ಎಂಬುದಾಗಿದೆ.

ಆದಾಗ್ಯೂ ಕೆಲ ಧನವಂತರು ಈ ರೆಪಿಯಾರ್ ಮಗ್ಗಗಳನ್ನು ದೊಡ್ಡಬಳ್ಳಾಪುರದಲ್ಲಿ ಅಳವಡಿಸಿ, ಗುಡಿ ಕಾರ್ಮಿಕರ ಹೆಸರಿನಲ್ಲಿ ಸರ್ಕಾರದಿಂದ ಉಚಿತ ವಿದ್ಯುತ್ ಪಡೆದು, ಗುಡಿ ಕಾರ್ಮಿಕರಿಗೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.

ಇದರ ಜೊತೆಗೆ ಸೂರತ್‌ನಿಂದ ಇದೇ ಮಾದರಿಯ ಮಗ್ಗಗಳಿಂದ ತಯಾರಾದ ಸೀರೆಗಳನ್ನು ಕಡಿಮೆ ದರದಲ್ಲಿ ತಂದು, ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದು, ಇದರಿಂದಾಗಿ ದೊಡ್ಡಬಳ್ಳಾಪುರದ ನೇಕಾರ ಕೂಲಿ ಕಾರ್ಮಿಕರು, ಬಡ ನೇಕಾರ ಮಾಲೀಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂಬ ಗಂಭೀರ ಮಾತು ವ್ಯಾಪಕವಾಗಿದೆ.

ಈ ಕುರಿತಂತೆ ಕೆಲವರು ಸಭೆಯಲ್ಲಿ ಮಾತನಾಡಿದರು, ವೇದಿಕೆಯಲ್ಲಿ ಇದ್ದವರ ಗಮನಕ್ಕೆ ಬರುವಂತೆ ಅರ್ಥೈಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಒಟ್ಟಾರೆ ಹೊರ ರಾಜ್ಯಗಳ ಕೂಲಿ ಕಾರ್ಮಿಕರಿಂದಾಗಿ ದೊಡ್ಡಬಳ್ಳಾಪುರದ ಸ್ಥಳೀಯರು ಬೀದಿಗೆ ಬಂದಿದ್ದಾರೆ ಎಂಬುದು ನಿನ್ನೆ ನಡೆದ ಸಭೆಯಲ್ಲಿ ಸೇರಿದ್ದ ಒಂದು ಸಾವಿರ ಮಂದಿಯಿಂದ ಬಯಲಿಗೆ ಬಂದಿದ್ದು, ಈ ಸ್ಥಳೀಯ ಕೂಲಿ ಕಾರ್ಮಿಕರಿಗೆ ಯಾವ ಪರಿಹಾರ ದೊರಕಲಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ರಾಜಕೀಯ

ದೆಹಲಿ ಬಾಂಬ್ ಸ್ಪೋಟವನ್ನು ಬಿಹಾರ ಚುನಾವಣೆಯನ್ನು ಜೋಡಿಸುವ ಷಡ್ಯಂತ್ರ: ಬಿ.ವೈ. ವಿಜಯೇಂದ್ರ ಟೀಕೆ

ದೆಹಲಿ ಬಾಂಬ್ ಸ್ಪೋಟವನ್ನು ಬಿಹಾರ ಚುನಾವಣೆಯನ್ನು ಜೋಡಿಸುವ ಷಡ್ಯಂತ್ರ: ಬಿ.ವೈ. ವಿಜಯೇಂದ್ರ ಟೀಕೆ

ಬಾಂಬ್ ಸ್ಫೋಟದಂಥ ಸಂದಿಗ್ಧ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಒಂದೇ ಧ್ವನಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ( B.Y. Vijayendra) ತಿಳಿಸಿದ್ದಾರೆ.

[ccc_my_favorite_select_button post_id="116125"]
ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾಗಳ ನಿಗಾಗೆ ಸಿಎಂ ಸೂಚನೆ

ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾಗಳ ನಿಗಾಗೆ ಸಿಎಂ ಸೂಚನೆ

ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾಗಳ ನಿಗಾ ಹೆಚ್ಚಿಸಿ, ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಿ ಎನ್ನುವ ಸೂಚನೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು

[ccc_my_favorite_select_button post_id="116144"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೆಹಲಿ ಕಾರು ಸ್ಫೋಟ: ಕೇಂದ್ರದ ವಿರುದ್ಧ ಆರೋಪ ಮಾಡೋ ಸಮಯ ಇದಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್

ದೆಹಲಿ ಕಾರು ಸ್ಫೋಟ: ಕೇಂದ್ರದ ವಿರುದ್ಧ ಆರೋಪ ಮಾಡೋ ಸಮಯ ಇದಲ್ಲ- ಡಿಸಿಎಂ

“ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ದೇಶದ ಐಕ್ಯತೆ, ಸಮಗ್ರತೆ, ಶಾಂತಿ ರಕ್ಷಣೆಗೆ ನಾವು ಉಗ್ರ ಚಟುವಟಿಕೆಗಳ ವಿರುದ್ದ ಬಹಳ ಜಾಗರೂಕರಾಗಿ ಇರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K.

[ccc_my_favorite_select_button post_id="116009"]
ದೊಡ್ಡಬಳ್ಳಾಪುರ: ನಾಡ ಬಾಂಬ್ ಸ್ಪೋಟ.. ಮಹಿಳೆಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ನಾಡ ಬಾಂಬ್ ಸ್ಪೋಟ.. ಮಹಿಳೆಗೆ ಗಂಭೀರ ಪೆಟ್ಟು..!

ಕಾಡು ಹಂದಿಯ ಬೇಟೆಯಾಡಲು ಅರಣ್ಯ ಪ್ರದೇಶದಲ್ಲಿ ಇಡಲಾಗಿದ್ದ ನಾಡ ಬಾಂಬ್ ಸ್ಪೋಟಿಸಿ (Nada bomb blast) ಮಹಿಳೆಗೆ ಗಂಭೀರ ಪೆಟ್ಟಾಗಿರುವ ಘಟನೆ ತಾಲೂಕಿನ

[ccc_my_favorite_select_button post_id="116061"]
KSRTC ಬಸ್‌ನಿಂದ ಬಿದ್ದು ಯುವತಿ ಸಾವು.. ಕುಟುಂಬಕ್ಕೆ ಪರಿಹಾರ

KSRTC ಬಸ್‌ನಿಂದ ಬಿದ್ದು ಯುವತಿ ಸಾವು.. ಕುಟುಂಬಕ್ಕೆ ಪರಿಹಾರ

ಬಸ್‌ನಲ್ಲಿ ಪಯಣಿಸುತ್ತಿದ್ದ ಭದ್ರಾವತಿ ತಾಲೂಕು ಬೈಪಾಸ್ ರಸ್ತೆ, ಹಳೇ ಭಂಡಾರಹಳ್ಳಿ ಗ್ರಾಮ ವಾಸಿ ಹೇಮಾವತಿ ಎಂಬ 19 ವರ್ಷದ ಯುವತಿಯು KSRTC ಬಸ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

[ccc_my_favorite_select_button post_id="116039"]

ಆರೋಗ್ಯ

ಸಿನಿಮಾ

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ತಿಥಿ ಸಿನಿಮಾದ ಖ್ಯಾತಿಯ ಗಡ್ಡಪ್ಪ (Gaddappa) ಅಲಿಯಾಸ್‌ ಚನ್ನೇಗೌಡ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

[ccc_my_favorite_select_button post_id="116057"]
error: Content is protected !!