ಕೋಲಾರ: ಐದು ವರ್ಷದ ಮಗಳನ್ನು (Daughter) ಕೊಂದು ತಂದೆ (Father) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ನಡೆದಿದೆ.
ಮುಡಿಯನೂರು ಗ್ರಾಮ ಲೋಕೇಶ್ (37 ವರ್ಷ) ಆತ್ಮಹತ್ಯೆಗೆ ಶರಣಾದ ತಂದೆ. ನಿಹಾರಿಕ (5 ವರ್ಷ) ಮೃತ ಮಗಳು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಲೋಕೇಶ್ ಪತ್ನಿ ಮನೆಯಿಂದ ಕಾಣೆಯಾಗಿದ್ದರು. ಪತ್ನಿ ಕಾಣೆಯಾದ ಹಿನ್ನೆಲೆ ಮನನೊಂದು ಲೋಕೇಶ್ ಮಗಳು ನಿಹಾರಿಕಳನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಬಳಿಕ ಮಗಳ ಶವ ಕಾರಲ್ಲಿಟ್ಟು ಲೋಕೇಶ್ ಮರಕ್ಕೆ ನೇಣು ನೇಣುಬಿಗಿದುಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.