ಬೆಂ.ಗ್ರಾ.ಜಿಲ್ಲೆ: ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ (Bar Association) ಖಜಾಂಚಿ (Treasurer) ಸ್ಥಾನ ಹಾಗೂ ಮಹಿಳಾ ಮೀಸಲನ್ನು (Women’s reservation) ಬೈಲಾ ತಿದ್ದುಪಡಿ ಮಾಡದೆ ಕಾನೂನು ಬಾಹಿರವಾಗಿ ನಿಗದಿ ಮಾಡಿದ್ದು, ಇದನ್ನು ರದ್ದು ಮಾಡುವಂತೆ ವಕೀಲರಾದ ಟಿ.ಕೆ.ಹನುಮಂತರಾಜು (T.K. Hanumantharaju) ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗೆ ದೂರು (Complaint) ನೀಡಿದ್ದಾರೆ.
ದೂರಿನ ಅನ್ವಯ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಖಜಾಂಚಿ ಸ್ಥಾನ ಹಾಗೂ 3 ನಿರ್ದೇಶಕರ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಖಜಾಂಚಿ ಸ್ಥಾನ ಹಾಗೂ 3 ನಿರ್ದೇಶಕರ ಸ್ಥಾನಗಳನ್ನು ಮಹಿಳೆಯರಿಗೆ ಮಿಸಲಿಟ್ಟಿರುವುದು ಸರಿಯಾದರು, ಜಾರಿ ಮಾಡುತ್ತಿರುವ ವಿಧಾನ ಕಾನೂನು ಬಾಹಿರವಾಗಿದೆ. ಬೈಲಾ ತಿದ್ದುಪಡಿ ಮಾಡದೇ ಕಾನೂನು ಬಾಹಿರವಾಗಿ ನ.04 ರಂದು ಮಹಿಳಾ ಮೀಸಲು ಸ್ಥಾನಗಳ ಚುನಾವಣೆಗೆ ಪ್ರಕಟಿಸಿರುವುದನ್ನು ವಜಾ ಮಾಡುವಂತೆ ಹಾಗೂ ಅರ್ಜಿ ವಿಲೇವಾರಿ ಆಗುವವರೆಗೆ ಯಥಾ ಸ್ಥಿತಿ ಕಾಪಾಡುವಂತೆ ಕೋರಿದ್ದಾರೆ.
ಅಲ್ಲದೆ ಸರ್ವ ಸದಸ್ಯರ ಸಭೆಯಲ್ಲಿ ಶೇ.75 ರಷ್ಟು ಸದಸ್ಯರ ಹಾಜರಿ ಇಲ್ಲದೆ ಕೈಗೊಂಡಿರುವ ನಿರ್ಣಯ ಕಾನೂನು ಬಾಹಿರವಾಗಿದೆ. ಆದ್ದರಿಂದ ಕಾರ್ಯಕಾರಿ ಮಂಡಳಿ ಚುನಾವಣೆ ನಡೆಸಲು ನೇಮಕ ಮಾಡಿರುವ ಚುನಾವಣೆ ಅಧಿಕಾರಿಗಳನ್ನು ವಜಾ ಮಾಡಿವಂತೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸಂಘಗಳ ನೊಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ದೊಡ್ಡಬಳ್ಳಾಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಪತ್ರಬರೆದಿದ್ದು, ಆರೋಪಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
(ಈ ಸುದ್ದಿಯಲ್ಲಿ ವಕೀಲರಾದ ಟಿ.ಕೆ. ಹನುಮಂತರಾಜು ಅವರು ನೀಡಿದ ದೂರಿನ ಪ್ರತಿ, ಇಲಾಖೆ ಪ್ರತಿಕ್ರಿಯೆಯ ಪ್ರತಿ ದೊರೆತ ಬಳಿಕ ಪ್ರಕಟಿಸಲಾಗಿದೆ. ಇವರ ದೂರಿಗೆ ಆಕ್ಷೇಪದ ಪ್ರತಿಕ್ರಿಯೆ ನೀಡುವರು ಇದ್ದಲ್ಲಿ ಹರಿತಲೇಖನಿಯಲ್ಲಿ ಮುಕ್ತವಾಗಿ ಪ್ರಕಟಿಸುತ್ತೇವೆ.)