ದೊಡ್ಡಬಳ್ಳಾಪುರ; ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕನಕದಾಸರ ಭಾವಚಿತ್ರವನ್ನು ಪೂಜಿಸಿ, ಪುಷ್ಪನಮನ ಸಲ್ಲಿಲಾಯಿತು. ಕನಕದಾಸರ ಜೀವನಶೈಲಿ, ಅವರ ಕೊಡುಗೆಯನ್ನು ಸ್ಮರಿಸಲಾಯಿತು.

ಕನಕದಾಸರ ಜೀವನ ನಶ್ವರ, ಈ ಜೀವನವನ್ನು ಸಾರ್ಥಕತೆಯಿಂದ ಕಳೆಯಬೇಕೆಂಬ ಸಂದೇಶವುಳ್ಳ ಕೀರ್ತನೆಗಳನ್ನು ಮಕ್ಕಳು ಹಾಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ ಬಿ ವಿ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.