ದೊಡ್ಡಬಳ್ಳಾಪುರ: ಸಂಕಷ್ಟ ಚತುರ್ಥಿ (Sankashta Chaturthi) ಹಿನ್ನೆಲೆಯಲ್ಲಿ ಇಂದು ತಾಲೂಕಿನ ಆರೂಢಿ (Arudi) ಗ್ರಾಮದ ಬಸ್ ನಿಲ್ದಾಣ ಬಳಿಯಿರುವ ಬಲಮುರಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೂ ದೇವಾಲಯದಲ್ಲಿ ವಿಶೇಷ ಅಲಂಕಾರ, ದೇವರಿಗೆ ಪೂಜಾ ಕೈಕಂರ್ಯಗಳನ್ನು ನೆರವೇರಿಸಿ, ಪ್ರಸಾದ ವಿನಿಯೋಗ ಕೈಗೊಳ್ಳಲಾಗಿತ್ತು.
ಸ್ಥಳೀಯ ವರ್ತಕರು ಈ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ನೂರಾರು ಮಹಿಳೆಯರು, ಮಕ್ಕಳು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೇಳಗಿದರು.