ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಸುಮಾರು 5 ದಿನದ ಹಸಗೂಸು (Newborn baby boy) ಪತ್ತೆಯಾಗಿರುವ ಘಟನೆ ಹಾಡೋನಹಳ್ಳಿ ಹಾಗೂ ತಿರುಮಗೊಂಡನಹಳ್ಳಿ ನಡುವಿನ ಖಾಸಗಿ ಲೇಔಟ್ ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಲೇಔಟ್ ನಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿದ ಸ್ಥಳೀಯ ನಿವಾಸಿಗಳು. ಹುಡುಕಾಟ ನಡೆಸಿ ಮಗುವನ್ನು ರಕ್ಷಿಸಿ, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು, ನಗರದ ತಾಯಿ-ಮಗು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸ್ತುತ ವರದಿಯ ಅನ್ವಯ ಮಗು ಆರೋಗ್ಯವಾಗಿದೆ.
ಮುಂದುವರಿದು ಪೋಷಕರು ಹುಡುಕಾಟ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಪೋಷಕರು ದೊರಕದಿದ್ದಲ್ಲಿ ಎರಡು ತಿಂಗಳ ಬಳಿಕ ದತ್ತು ಪ್ರಕ್ರಿಯೆಗೆ ಒಳಪಡಿಸುವ ಸಾಧ್ಯತೆ ಇದೆ.