ದೊಡ್ಡಬಳ್ಳಾಪುರ: ನಗರದ ರಂಗಪ್ಪ ವೃತ್ತದ ಬಳಿಯಿರುವ ಶ್ರೀ ಶಿರಡಿ ಸಾಯಿಬಾಬಾ (Shri Shirdi Sai Baba Temple) ಮಂದಿರದಲ್ಲಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ ವತಿಯಿಂದ ಕಾರ್ತಿಕ ಸೋಮವಾರ ಶಿವಶಕ್ತಿ ಮಹಾಯಜ್ಞ (Shakti Mahayagna) ಹಿಮಾಲಯದ ತಪಸ್ವಿ ನಾಗಾಸಾಧು ರಾಜ ರಾಜೇಶ್ವರ್ ಪುರಿ (Naga Sadhu Raja Rajeshwar Puri) ನೇತೃತ್ವದಲ್ಲಿ ಶ್ರದ್ದಾಭಕ್ತಿಗಳಿಂದ ನೆರವೇರಿತು.
ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಯಾಗ ನಡೆಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ನಡೆಯಿತು.
ನಾಗಸಾಧುಗಳನ್ನು ಭಕ್ತ ವೃಂದ ಭೇಟಿಯಾಗಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪರಿಹಾರ, ಮಾರ್ಗದರ್ಶನ ಪಡೆದರು. ನಾಗಾಸಾಧುಗಳನ್ನು ಮನೆಗೆ ಕರೆದುಕೊಂಡು ಹೋಗಿ ಆಶೀರ್ವಾದ ಸಹ ಪಡೆದರು.