ಮುಂಬೈ: ಹಿರಿಯ ನಟ ಧರ್ಮೇಂದ್ರ (Dharmendra) ಅವರ ಆರೋಗ್ಯ (Health) ಸೋಮವಾರ ಹದಗೆಟ್ಟ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುದ್ದಿ ಹೊರಬಿದ್ದ ತಕ್ಷಣ ಅಭಿಮಾನಿಗಳು ಆತಂಕಕ್ಕೊಳಗಾದರು, ಸೆಲೆಬ್ರಿಟಿಗಳು ಸಹ ನಟನನ್ನು ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದರು.
ಅವರ ಮಗ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಪತ್ನಿ ಮತ್ತು ಪ್ರಸಿದ್ಧ ನಟಿ ಹೇಮಾ ಮಾಲಿನಿ, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀಷಾ ಪಟೇಲ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಆಸ್ಪತ್ರೆಗೆ ಭೇಟಿ ನೀಡಿದರು.
ನಟ ಸನ್ನಿ ಡಿಯೋಲ್ ಅವರ ತಂಡವು ಧರ್ಮೇಂದ್ರ ಅವರ ಅರೋಗ್ಯ ಸ್ಥಿರವಾಗಿದ್ದು, ಪ್ರಸ್ತುತ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಹೇಳಿಕೆ ನೀಡಿದೆ.
“ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಹಂಚಿಕೊಳ್ಳಲಾಗುವುದು. ಅವರ ಶೀಘ್ರ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸಬೇಕು ಮತ್ತು ಕುಟುಂಬದ ಗೌಪ್ಯತೆಯ ಹಕ್ಕನ್ನು ಗೌರವಿಸಬೇಕು” ಎಂದು ಅವರು ಹೇಳಿದೆ.
ಮಾಧ್ಯಮಗಳು ವಿರುದ್ಧ ಪುತ್ರಿ ಗರಂ

ಇನ್ನು ಧರ್ಮೇಂದ್ರ ಅವರ ಕುರಿತು ಸಾವಿನ ಸುದ್ದಿ ಪ್ರಕಟಿಸಿದ ವಿರುದ್ಧ ಪುತ್ರಿ ಇಶಾ ಡಿಯೋಲ್ (Esha Deol) ಆಕ್ರೋಶ ವ್ಯಕ್ತಪಡಿಸಿದ್ದು, ಮಾಧ್ಯಮಗಳು ಮಿತಿಮೀರಿವೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳಾಗಿ ಕಾಣುತ್ತಿವೆ.
ನನ್ನ ತಂದೆ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದ ಗೌಪ್ಯತೆಯನ್ನು ಎಲ್ಲರೂ ಗೌರವಿಸುವಂತೆ ನಾವು ವಿನಂತಿಸುತ್ತೇವೆ. ಅಪ್ಪನ ತ್ವರಿ ಚೇತರಿಕೆಗಾಗಿ ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದಿದ್ದಾರೆ .