ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಅಧ್ಯಕ್ಷರ ಆಯ್ಕೆ ನ.20 ರಂದು ನಡೆಯಲಿದೆ.
ಟಿಎಪಿಎಂಸಿಎಸ್ನಲ್ಲಿ ನ.13 ನಿರ್ದೇಶಕರ ಸ್ಥಾನದ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದಾರೆ. ಆದ್ದರಿಂದ ಅಧ್ಯಕ್ಷರ ಆಯ್ಕೆಗೆ ಬಹುಮತದ ಗೊಂದಲ ಇಲ್ಲ.
ಆದರೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ನಾಲ್ಕು ಜನ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಹೊಸಬರಿಗೆ ಅಧ್ಯಕ್ಷ ಸ್ಥಾನ ನೀಡಬೇಕೊ ಅಥವಾ ಈ ಹಿಂದಿನ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವ ಮೂಲಕ ಎರಡನೇ ಬಾರಿಗೂ ಆಯ್ಕೆಯಾಗಿ ಬಂದಿರುವ ನಿರ್ದೇಶಕರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಬೇಕೊ ಎನ್ನುವ ಪ್ರಶ್ನೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರಲ್ಲಿ ಮೂಡಿದೆ.
4 ಮಂದಿ ಬೇಡಿಕೆ
ಈ ಕುರಿತಂತೆ ನಿನ್ನೆ (ಸೋಮವಾರ) ಸಭೆ ನಡೆಸಲಾಗಿದೆ., ಈ ಸಭೆಯಲ್ಲಿ ನಾಲ್ಕು ಮಂದಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಅಂತಿಮ ನಿರ್ಣಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಯಾರ ಹೆಸರು ಸೂಚಿಸುವರೋ ಅವರು, ನ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳ ಹರಿತಲೇಖನಿಗೆ ತಿಳಿಸಿವೆ