Open the door, Bigg Boss

ಬಾಗಿಲು ತೆಗೆದು ಬಿಡಿ ಬಿಗ್ ಬಾಸ್; ವೀಕ್ಷಕರು ರೊಚ್ಚಿಗೆದ್ದಿದ್ದೇಕೆ ಗೊತ್ತೆ..!

ಕೆ.ಎಂ.ಸಂತೋಷ್, ಆರೂಢಿ ( ದೊಡ್ಡಬಳ್ಳಾಪುರ): ಬಿಗ್​ಬಾಸ್​ (Bigg Boss) 12 ನೇ ಸೀಸನ್ ರಿಯಾಲಿಟಿ ಶೋ ಯಶಸ್ವಿಯಾಗಿ 50ನೇ ದಿನ ಮುಗಿಸಿದ್ದು, ಗಿಲ್ಲಿ ನಟನ ವಿರುದ್ಧ ದೂರು, ಅಶ್ವಿನಿ ಗೌಡ ಅವರ ಕೂಗಾಟ, ಕಣ್ಣೀರು ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ಕಳೆದ ಶನಿವಾರ ಅಶ್ವಿನಿ ಗೌಡ ಬಣದಲ್ಲಿದ್ದ ಕಾಕ್ರೋಚ್ ಸುಧೀರ್ ಹೊರಗೆ ಬಂದಿದ್ದಾರೆ.

ಬಿಗ್​ಬಾಸ್​ 12ರಲ್ಲಿ ಗಿಲ್ಲಿ ನಟ ತಂಡ ಹಾಗೂ ಅಶ್ವಿನಿ ತಂಡ ಎಂದು ವಿಂಗಡನೆಯಾಗಿದ್ದು, ಗಿಲ್ಲಿ ನಟ ತಂಡ ಎಂದರೆ ಮನರಂಜನೆ, ಅಶ್ವಿನಿ ತಂಡ ಎಂದರೆ ಜಗಳ, ಕಿರಿಕ್ ಎಂಬುದು ವೀಕ್ಷಕರು ಬಹುತೇಕ ಅಭಿಪ್ರಾಯಕ್ಕೆ ಬಂದಿರುವುದು ಕಳೆದ ವರದಿಯಲ್ಲಿ ಹೇಳಿದ್ದೇವೆ.

ದಿನೇ ದಿನೇ ಅಶ್ವಿನಿ ತಂಡದ ಪರ ಇರುವವರು ಒಬ್ಬರಾಗಿ ಗಿಲ್ಲಿ ತಂಡವನ್ನು ಸೇರುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ 2.O ಆಟ ಶುರುವಾಗಿದೆ.

ಇನ್ನೂ ರಘು ಕ್ಯಾಪ್ಟನ್ ಆದ ಬಳಿಕ ಸ್ವಯಂ ಘೋಷಿತ ವೈಸ್ ಕ್ಯಾಪ್ಟನ್ ಗಿಲ್ಲಿ ಕ್ವಾಟ್ಲೆ ಶುರು ಮಾಡಿದ್ದರು. ಆದರೆ ರಘು ಗಿಲ್ಲಿನ ಕೆಲಸಕ್ಕಿಟ್ಟಿದ್ದು ನೋಡಿ ಯಾಕಣ್ಣ ಹೀಗ್ ಬೆನ್ನಿಗೆ ಬಿದ್ದೆ ಎಂದು ಗೊಣಗಾಡಿದ್ದು ವೀಕ್ಷಕರನ್ನು ರಂಜಿಸಿದೆ‌.

ಇನ್ನೂ ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯ ವೇಳೆ ಗಿಲ್ಲಿ ಹಾಗೂ ಅಶ್ವಿನಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮತ್ತೆ ಅಶ್ವಿನಿ ಗೌಡ ಬೇಕಾಬಿಟ್ಟಿ ಮಾತಾಡಿದ್ದು, ಗಿಲ್ಲಿ ತಿರುಗೇಟು ನೀಡಿದ್ದು, ಬಳಿಕ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದರು. ಈ ವೇಳೆ ಗಿಲ್ಲಿಯದ್ದೇ ತಪ್ಪು ಎಂದು ಕೆಲ ಸದಸ್ಯರು ಹೇಳಿದರು, ವೀಕ್ಷಕರು ಮಾತ್ರ ಅಶ್ವಿನಿ ಗೌಡ ತಪ್ಪು ಎಂದು ವಕಾಲತ್ತು ವಹಿಸುತ್ತಾರೆ.

ಮುಂದುವರಿದು ಗುರುವಾರ ಸಂಜೆ ಕೂಡ ಅಶ್ವಿನಿ ಗೌಡ ಎಡವಟ್ಟು ಮಾಡಿಕೊಂಡಿದ್ದು, ಕ್ಯಾಪ್ಟನ್ ರಘು ಅವರು ಕೆಲಸ ಮಾಡಲು ಹೇಳಿದಾಗ ವರ್ತಿಸಿದ ರೀತಿ, ರಘು ವಿರುದ್ಧ ಏಕವಚನ ಬಳಕೆ, ಆಕ್ರೋಶ, ಬಾಗಿಲು ಬಳಿ ಬಂದು ನಾ ಇಲ್ಲಿ ಇರಲ್ಲ ಹೊರಟೋಗುವೆ ಬಾಗಿಲು ತೆರೆಯಿರಿ ಎಂದು ಹೈಡ್ರಾಮ ಸೃಷ್ಟಿಸಿದರು.

ಈ ವರೆಗೆ ಒಂದು ಹಂತದಲ್ಲಿ ಗಿಲ್ಲಿಯ ತಂಡ ಪರವಾಗಿರುವ ವೀಕ್ಷಕರು ಕೇರಳಿದ್ದು, ಈಯಮ್ಮನ ನಾಟಕ ನೋಡಲು ಸಾಧ್ಯವಾಗುತ್ತಿಲ್ಲ‌. ದಿನಾ ಒಂದೊಂದು ಡ್ರಾಮ ತಗೆದು ಸಿಂಪತಿ ಪಡೆಯಲು ಮುಂದಾಗಿದ್ದಾರೆ. ಅವಕಾಶ ಬಂದಿದೆ ಬಾಗಿಲು ತೆಗೆದು ಆಚೆ ಕಳಿಸಿಬಿಡಿ, ಬಿಗ್ ಬಾಸ್ ನೋಡಲು ಸಾಧ್ಯವಾಗದಷ್ಟು ಬೇಸರ ಅಶ್ವಿನಿ ಗೌಡ ಸೃಷ್ಟಿಸುತ್ತಿದ್ದಾರೆ.

ಈಕೆ ರಕ್ಷಿತ, ಕಾವ್ಯ, ಗಿಲ್ಲಿ ಈಗ ರಘು ಅವರ ವಿರುದ್ಧ ಬಳಸುವ ಭಾಷೆ ಮಿತಿ ಮೀರಿದೆ. ಮೊದಲು ಗೌರವವನ್ನ ಕೊಟ್ಟು ಆನಂತರ ನಿರೀಕ್ಷೆ ಮಾಡಬೇಕು. ಅಶ್ವಿನಿ ಇತರರಿಗೆ ಗೌರವ ಕೊಡೋದಿಲ್ಲ. ಆದರೆ, ಬೇರೆಯವರು ಅಶ್ವಿನಿಗೆ ಗೌರವ ಕೊಡಬೇಕು.

ಗಿಲ್ಲಿ ನಟನ ಯೋಗ್ಯತೆ ಬಗ್ಗೆ ಅಶ್ವಿನಿ ಮಾತಾಡುತ್ತಾರೆ. ಅದಕ್ಕೆ ಪ್ರತಿಕ್ರಿಯೆ ಬಂದಾಗ ನಾಟಕ ಮಾಡುತ್ತಾರೆ’ ದಯವಿಟ್ಟು ಆಚೆ ಕಳಿಸಿಬಿಡಿ ಎಂದು ವಿಡಿಯೋಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

’ನೀನ್ಯಾವನೋ’’, ‘‘ಹೋಗೋಲೋ’’, ‘’ನಿನ್ ಯೋಗ್ಯತೆಗಿಷ್ಟು..’’, ‘’ಮುಚ್ಕೊಂಡ್ ಮಲ್ಕೋ’’, ‘’ಎಸ್ ಕ್ಯಾಟಗರಿ’’, ‘’ಅಮಾವಾಸ್ಯೆ’’ ಮುಂತಾದ ಮಾತುಗಳು ಅಶ್ವಿನಿ ಗೌಡ ಬಾಯಿಂದಲೇ ಬಂದಿದೆ. ಇನ್ನೊಬ್ಬರ ಬಗ್ಗೆ ಕೇವಲವಾಗಿ ಮಾತಾಡುವ ಅಶ್ವಿನಿ ಗೌಡ, ಬೇರೆಯವರಿಂದ ಗೌರವ ನಿರೀಕ್ಷಿಸೋದು ಸರಿಯೇ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಗಿಲ್ಲಿ ನಟ ಹಾಗೂ ರಘು ಜೊತೆ ಜೋರು ಜಗಳ ಆಡಿದ್ಮೇಲೆ ಅಶ್ವಿನಿ ಗೌಡ ಕಣ್ಣೀರು ಸುರಿಸಿದ್ದಾರೆ. ಅವಮಾನ ಆಗಿದೆ, ಇಲ್ಲಿರೋಲ್ಲ, ಹೊರಗೆ ಹೋಗಬೇಕು ಅಂತ ಹಠ ಹಿಡಿದಿದ್ದಾರೆ. ಊಟ, ತಿಂಡಿ ಬಿಟ್ಟು ಸತ್ಯಾಗ್ರಹ ಮಾಡುತ್ತಿರುವ ಅಶ್ವಿನಿ ಗೌಡ ಬಗ್ಗೆ ವೀಕ್ಷಕರು ಕಿಡಿ ಕಾರಿದ್ದಾರೆ.

ಅಲ್ಲದೆ ನಿರೂಪಕ ಕಿಚ್ಚ ಸುದೀಪ್ ಅವರಿಗೂ ಪ್ರಶ್ನೆ ಮಾಡುತ್ತಿದ್ದು, ಬರಲಿರುವ ವಾರದ ಸಂತೆಯಲ್ಲಿ ಆಕೆಯ ಪರ ಮೃದು ಧೋರಣೆ ತೋರಿದರೆ ಬಿಗ್ ಬಾಸ್ ನೋಡುವುದ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಸಿಸನ್ 12 ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದ್ದು, ಗಿಲ್ಲಿ ತಂಡದ ಪರ ಈ ವಾರವೂ ಬೆಂಬಲ ಮುಂದುವರಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಕ್ಷಕರು ಹಂಚಿಕೊಂಡಿರುವ ವಿಡಿಯೋ ಬಳಸಲಾಗಿದೆ.!

ರಾಜಕೀಯ

ದ್ವೇಷಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ: ಆರ್‌.ಅಶೋಕ

ದ್ವೇಷಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ: ಆರ್‌.ಅಶೋಕ

ದ್ವೇಷಭಾಷಣ ಪ್ರತಿಬಂಧಕ ಮಸೂದೆ ವಾಕ್‌ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="118314"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್ ಕುಮಾರಸ್ವಾಮಿ

ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್

ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ (NDA) ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

[ccc_my_favorite_select_button post_id="118301"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ (Accident) ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ **** ಹಾಗೂ *** ನಡುವೆ ಸಂಭವಿಸಿದೆ.

[ccc_my_favorite_select_button post_id="118304"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!