ಅಯೋಧ್ಯೆ: ಹಿಂದೂಗಳ ಕನಸಾದ ರಾಮ ಜನ್ಮಭೂಮಿ ಅಯೋಧ್ಯೆಯ ರಾಮ ಮಂದಿರದ ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ನ. 25) ಕೇಸರಿ ಧ್ವಜ ಹಾರಿಸಿದರು.
ಹಿಂದೂಗಳು ಶುಭವೆಂದು ಪರಿಗಣಿಸುವ ಗ್ರಹ ನಕ್ಷತ್ರಪುಂಜವಾದ ‘ಅಭಿಜಿತ್ ಮುಹೂರ್ತ’ದಲ್ಲಿ ಧ್ವಜಾರೋಹಣವನ್ನು ಮಾಡಲಾಯಿತು.
ರಾಮ ಮಂದಿರ ನಿರ್ಮಾಣದ ಔಪಚಾರಿಕವಾಗಿ ಪೂರ್ಣಗೊಂಡಿದ್ದರ ಸಂಕೇತವಾಗಿ ಈ ಧ್ವಜಾರೋಹಣ ಮಾಡಲಾಯಿತು.
10 ಅಡಿ ಎತ್ತರ ಮತ್ತು 20 ಅಡಿ ಉದ್ದದ ತ್ರಿಕೋನ ಧ್ವಜದಲ್ಲಿ ಪ್ರಕಾಶಮಾನ ಸೂರ್ಯನ ಚಿತ್ರ, ಪವಿತ್ರ ಸಂಕೇತ ‘ಓಂ’ ಮತ್ತು ಕೋವಿದಾರ ವೃಕ್ಷವನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದ್ದರು.