ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಇಂದು ಸಂವಿಧಾನ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಸಭೆಯನ್ನು ಏರ್ಪಡಿಸಲಾಗಿದ್ದು, ಈ ಸಭೆಯ ಮೂಲಕ ವಿದ್ಯಾರ್ಥಿಗಳಿಗೆ ಸಂವಿಧಾನ ದಿನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.

ಪ್ರಾಂಶುಪಾಲರಾದ ಪ್ರಾಂಶುಪಾಲರಾದ ರೆಮ್ಯ ಬಿ ವಿ ಮಾತನಾಡಿ, 1949 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ಮಹತ್ವದ ದಿನವಾಗಿದೆ. ಸಂವಿಧಾನ ಶಿಲ್ಪಿಯಾದ ಡಾ.ಅಂಬೇಡ್ಕರ್ ಅವರು ಹಾಗೂ ಅವರ ತಂಡದ ಪರಿಶ್ರಮ ಹಾಗೂ ದೂರದೃಷ್ಟಿಯ ಫಲವೇ ನಮ್ಮ ಸಂವಿಧಾನ. ಇದರ ರಚನೆಯ ಹಿಂದಿರುವ ಶ್ರಮ ಹಾಗೂ ಮಹತ್ವದ ಬಗ್ಗೆ ಶಿಕ್ಷಕರು ಮಕ್ಕಳಿಗೆ ವಿವರಿಸಿದರು.

ಇದೇ ವೇಳೆ ಸಂವಿಧಾನ ಪೀಠಿಕೆಯನ್ನು ಓದಿ ಹೇಳಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಉಪಸ್ಥಿತರೆಲ್ಲರೂ ಪೀಠಿಕೆಯನ್ನು ಪುನರುಚ್ಛರಿಸಿದರು.

ದಿನದ ವಿಶೇಷವಾಗಿ ಶಾಲಾ ಸಭೆಯಲ್ಲಿ ಸಂಸತ್ತಿನ ಅಣಕು ಪ್ರದರ್ಶನವನ್ನು ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಸ್ಪೀಕರ್, ಪ್ರಧಾನ ಮಂತ್ರಿ, ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದ ಸದಸ್ಯರು, ವಿವಿಧ ಇಲಾಖೆಗಳ ಮಂತ್ರಿಗಳು ಮುಂತಾದ ಪದನಾಮಗಳನ್ನೊಂಡ ವಿದ್ಯಾರ್ಥಿ ಸದಸ್ಯರು ಅಣಕು ಸಂಸತ್ತನ್ನು ನಡೆಸಿಕೊಟ್ಟದ್ದು ವಿಶೇಷವಾಗಿತ್ತು.

ಇತರ ವಿದ್ಯಾರ್ಥಿಗಳಲ್ಲಿ ಸಂಸತ್ತು ಮತ್ತು ಅದರ ಪ್ರಕ್ರಿಯೆಗಳನ್ನು ಅರಿಯಲು ಸಹಾಯಕಾರಿಯಾಗಿದ್ದು, ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಶಿಕ್ಷಕರ ಮಾರ್ಗದರ್ಶನ ಹಾಗೂ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಅಭಿನಂದಿಸಿದರು.

ಸಮಾಜ ಶಾಸ್ತ್ರ ವಿಭಾಗ ದಿನಕರ್ ಕೆ, ವಿಲ್ಸನ್ ಎ ಎಸ್., ಚಂದನಾ ಎಸ್ ಮೋಹನ್ ಹಾಗೂ ಜಯಂತಿ ಅವರ ತಂಡದ ಮಾರ್ಗದರ್ಶನದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಮಣ್ಯ ಎ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು