ದೊಡ್ಡಬಳ್ಳಾಪುರ: ನಗರದ ರಂಗಪ್ಪ ಸರ್ಕಲ್ ಬಳಿಯ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ (Shirdi Sai Baba temple) ಬುಧವಾರ ರಾತ್ರಿ ಹುಂಡಿ ಕಳ್ಳತನವಾಗಿದೆ.
ದೇವಾಲಯದ ಬಾಗಿಲಿಗೆ ಅಳವಡಿಸಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕಬ್ಬಿಣದ ಹುಂಡಿ ಮುರಿದು ಕಾಣಿಕೆ ಕದಿಯಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.
ಬಳಿಕ ಸಮೀಪದಲ್ಲೇ ಇರುವ ಮತ್ತೊಂದು ಹುಂಡಿಯನ್ನು ಮುರಿದು ಸುಮಾರು 40 ಸಾವಿರ ಮೌಲ್ಯದ ಕಾಣಿಕೆ ಕದ್ದು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ದೇವಾಲಯದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಾಗಿದ್ದು, ಕಳ್ಳರು ಮಾನೀಟರ್ ಕದ್ದೊಯ್ದಿದ್ದಾರೆ.