ದೊಡ್ಡಬಳ್ಳಾಪುರ: ತಾಲೂಕಿನ ಕಾರನಾಳ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಗಂಗಾಧರ್ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಮಹತ್ವ, ಏಕೀಕರಣದ ಮೂಲ ಉದ್ದೇಶ ಹಾಗೂ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಏಕೀಕರಣದ ಸಮಯದಲ್ಲಿ ಎಲ್ಲೋ ಹೊರರಾಜ್ಯದಲ್ಲಿ ನೀರಿನ ಸಮಸ್ಯೆ, ಗಡಿ ಸಮಸ್ಯೆ ಭಾಷ ಸಮಸ್ಯೆಗಳಿದ್ದವು. ಆದರೆ ಈಗ ಖಾಸಗೀಕರಣ, ಉದಾರೀಕರಣದ ಪರಿಣಾಮವಾಗಿ ವಲಸಿಗರ ರೂಪದಲ್ಲಿ ನಮ್ಮ ಮನೆ ಬಾಗಿಲಿಗೆ ಸಮಸ್ಯೆಗಳು ಬಂದು ನಿಂತಿವೆ. ಕನ್ನಡಿಗರು ಜಾಗೃತರಾಗದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗೇಶ್, ಪಂಚಾಯತಿ ಸದಸ್ಯರಾದ ಮಧು, ಕರವೇ ಮುಖಂಡರಾದ ಶ್ರೀನಗರ ಮನು, ಫಯಾಜ್, ಕೋಡಿಗಳ್ಳಿ ಬಾಬು, ಶಿಕ್ಷಕರಾದ ಅಂಜನಾ ಮೂರ್ತಿ, ಕವಿತಾಂಬಾ
ಯುವ ಮುಖಂಡರಾದ ಶಶಿ ಕುಮಾರ್, ವಿನಯ್, ಭರತ್, ಓಂ ಪ್ರಕಾಶ್ ಮತ್ತಿತರರಿದ್ದರು.