ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಪ್ರಸ್ತುತ ಆವೃತ್ತಿಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss )50 ದಿನಗಳನ್ನು ಪೂರೈಸಿ, ಮನೆ ಮಂದಿ ಕೂತು ಎಂಜಾಯ್ ಮಾಡಬಹುದು ಎಂಬಂತೆ ವೀಕ್ಷಕರ ಗಮನ ಸೆಳೆದು ಮುಂದೆ ಸಾಗುತ್ತಿದೆ.
ಕಳೆದ ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ನಾಮಿನೇಟ್ ಆಗಿದ್ದ ಗಿಲ್ಲಿ ನಟ ಸೇಫ್ ಎಂದು ನಿರೂಪಕ ಸುದೀಪ್ ಹೇಳುತ್ತಿದ್ದಂತೆ ವೀಕ್ಷಕರ ಸಂಭ್ರಮ ಮುಗಿಲು ಮುಟ್ಟಿತು.
ಅದು ಯಾವ ಮಟಕ್ಕೆ ಎಂದರೆ ಚಪ್ಪಾಳೆ, ಸಿಳ್ಳೆ, ಕೂಗಾಟ ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಗಳು ಅಚ್ಚರಿಗೆ ಒಳಗಾದರು.
Gilli 1% competition illa 🤙💥
— K∆RNA (@KarnaKarna77918) December 1, 2025
This is fact ..
Avn already win agidane trophy na
Just formality goskara show naditide.. ✅
Yelrigu uri avn kandre adu expose agtide guest band hodaginda aste ..
YENRO KITTKOTIRA ❗
HYPE AND CRAZE IS UNREAL FOR GILLI 📈💥#bbk12 #Gilli pic.twitter.com/egp3FeHKX2
ಬಿಗ್ ಬಾಸ್ ಸೀಸನ್ 12 ಕುಟುಂಬ ಸಮೇತ ವೀಕ್ಷಕರ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಗಿಲ್ಲಿಯ ನಟನ ಹಾಸ್ಯಪ್ರವೃತ್ತಿ ಮತ್ತು ತಾಳ್ಮೆ ಅಶ್ವಿನಿಯವರ ಘನತೆ, ರಘುವಿನ ಗಾಂಭೀರ್ಯ, ರಕ್ಷಿತಾಳ ಮುಗ್ಧತೆ, ರಾಶಿಕಾಳ ಸೌಂದರ್ಯ, ರಾಶಿಳ ಕೋಪ, ಧ್ರುವಂತ್ನ ಪೆದ್ದುತನ, ಕಾವ್ಯಾಳ ಬುದ್ಧಿವಂತಿಕೆ ಎಲ್ಲವೂ ವೀಕ್ಷಕರ ರಂಜಿಸುತ್ತಿದೆ.
ಗಿಲ್ಲಿ ಬೆನ್ನಿಗೆ ಚುಚ್ಚಿದ ರಘು..!
ಖ್ಯಾತ ಬಹುಭಾಷಾ ಸಿನಿಮಾ ‘ಬಾಹುಬಲಿ -1’ರಲ್ಲಿ ಬಾಹುಬಲಿ ಬೆನ್ನಿಗೆ ನಂಬಿಕಸ್ಥ ಕಟ್ಟಪ್ಪನೇ ಹಿಂದಿನಿಂದ ಕತ್ತಿಯಿಂದ ಚುಚ್ಚಿ ಕೊಂದ ಹಾಗೆ, ‘ಬಿಗ್ ಬಾಸ್’ ಮನೆಯಲ್ಲಿ ಗಿಲ್ಲಿ ನಟನ ಆತ್ಮೀಯ ಕುಚ್ಚಿಕ್ಕೂ ಬೆನ್ನಿಗೆ ರಘು ಚೂರಿ ಹಾಕಿದ್ದಾರೆ.
ಆ ಮೂಲಕ ಗಿಲ್ಲಿಯನ್ನ ರಘು ಅವರು ನಾಮಿನೇಟ್ ಮಾಡಿದ್ದಾರೆ. ಇದು ವೀಕ್ಷಕರಿಗೆ ಬೇಸರಕ್ಕೆ ಕಾರಣವಾಗಿದೆ.
ಜನ ಮೆಚ್ಚಿದ ಗಿಲ್ಲಿ- ರಘು ನಡುವಿನ ಟಾಮ್ ಅಂಡ್ ಜರಿ ಒಡನಾಟ
ಬಿಗ್ ಬಸ್ 12 ಸೀಸನ್ ಅಲ್ಲಿ ಗಿಲ್ಲಿ ನಟ ಹಾಗೂ ರಘು ಪರಿಚಿತರು. ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಮೇಲೆ ರಘು ಜೊತೆ ಹೆಚ್ಚು ಆತ್ಮೀಯವಾಗಿದ್ದವರು ಗಿಲ್ಲಿ ನಟ.
ಸದಾ ಕಾಲ ರಘು ಅವರ ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರ ಒಡನಾಟ ‘ಟಾಮ್ ಅಂಡ್ ಜರಿ’, ‘ರಘು ಲಪ್ಸ್ ಗಿಲ್ಲಿ’ ವಿಡಿಯೋ ವೈರಲ್ ಆಗಿತ್ತು.
ಹೀಗಿರುವಾಗಲೇ ಅನೇಕ ಸ್ಪರ್ಧಿಗಳು ರಘು ವಿರುದ್ದ ನಾಮಿನೇಷನ್ಗೆ ಗಿಲ್ಲಿ ನಡುವಿನ ಒಡನಾಟ ಕಾರಣ ನೀಡಿರುವುದರಿಂದ ರಘು ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದು ಮುಂದುವರಿದು ಗಿಲ್ಲಿ ನಟ ಮೇಲೆ ರಘು ಏಕಾಏಕಿ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ.. ಗಿಲ್ಲಿ ನಟ ಅವರನ್ನ ರಘು ನಾಮಿನೇಟ್ ಮಾಡಿದ್ದಾರೆ!
Wish Gilli is as good as this in real life too…
— K∆RNA (@KarnaKarna77918) December 2, 2025
we all deserve a friend like him ❤️
he can give up anything for frdship 📈
Friend= Gilli 🤍
Gilli = Friend 🤍#BBK12 #Gilli pic.twitter.com/rxVcLTYPn7
ಕಳೆದ ವಾರದ ಹಿಂದೆಯಷ್ಟೇ ‘ಬಿಗ್ ಬಾಸ್’ ಮನೆಯಲ್ಲಿ ‘ಬಾಹುಬಲಿ’ ಸಿನಿಮಾದ ಬಗ್ಗೆ ಗಿಲ್ಲಿ ಮಾತನಾಡಿದ್ದರು.
“50 ದಿನಗಳ ಬಳಿಕ ಅಶ್ವಿನಿ ಗೌಡ 2.0 ಆರಂಭವಾಗಲಿದೆ.. ಅಶ್ವಿನಿ ಮೇಡಂ ಜಾಗವನ್ನ ರೀಪ್ಲೇಸ್ ಮಾಡೋದು ರಕ್ಷಿತಾ. ಕಟ್ಟಪ್ಪ ರಘು. ಕಟ್ಟಪ್ಪನಿಗೇ ರಕ್ಷಿತಾ ನಾಮಿನೇಟ್ ಮಾಡಿ ಚಾಕು ಚುಚ್ಚಿಬಿಟ್ಟಳು. ಪಾರ್ಟ್ 2 ಸಿನಿಮಾ ಬಂದರೂ ಇನ್ನೂ ಸರಿಯಾಗಿ ಕಾರಣ ಕೊಟ್ಟಿಲ್ಲ” ಅಂತ ಗಿಲ್ಲಿ ನಟ ಕಿಚ್ಚಾಯಿಸಿದ್ದರು.
Raghu n Gilli recreated Bahubali scene😅👏
— K∆RNA (@KarnaKarna77918) December 1, 2025
Gilli predicted he is going to nominated by raghu🤙🤣
Raghu anna totally manipulated and misunderstood Gilli..
Yakapa raghu ning uri Gilli kandre 🤡
Gilli 🆚 Whole 🏠
ONE MAN 💜🅐🅡🅜🅨⁷⟬⟭💜 GILLI 💥@ColorsKannada#BBK12 #Gilli pic.twitter.com/y3lfLpY0Yu
ಆದರೆ ನಿನ್ನೆ ಸಂಚಿಕೆಯಲ್ಲಿ, ‘ಬಿಗ್ ಬಾಸ್’ ಮನೆಯಲ್ಲಿ ಅಕ್ಷರಶಃ ಬಾಹುಬಲಿ’ ಸಿನಿಮಾದ ಸೀನ್ ರೀ-ಕ್ರಿಯೇಟ್ ಆಗಿದ್ದು, ಗಿಲ್ಲಿಯ ಹಾಸ್ಯ ಸಮಯ ಪ್ರಜ್ಞೆ, ಬಾಹುಬಲಿಯಲ್ಲಿ ಕಟ್ಟಪ್ಪ ಬೆನ್ನಿಗೆ ಚೂರಿ ಚುಚ್ಚಿದ ದೃಶ್ಯಗಳಂತೆ ರಘು ಚೂರಿ ಚುಚ್ಚಿರುವುದ ರೀಕ್ರಿಯೇಟ್ ಮಾಡಿರುವುದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೋಮವಾರದ ಸೀಸನ್ನಲ್ಲಿ ಸ್ಪರ್ಧಿಗಳ ಬೆನ್ನಿಗೆ ಚೂರಿ ಇರಿಯುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು. ಇದರ ಅನ್ವಯ ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ.
ಈ ವೇಳೆ ಗಿಲ್ಲಿ ಬಾಹುಬಲಿಗೆ ಕಟ್ಟಪ್ಪ ಬೆನ್ನಿಗೆ ಚೂರಿಯಿಂದ ಚುಚ್ಚಿದಾಗ ನಟ ಪ್ರಭಾಸ್ ನೀಡಿದ ರಿಯಾಕ್ಷನ್ ಅನ್ನು ತೋರಿಸಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ರಾಜಾಹುಲಿಯಲ್ಲಿ ಯಶ್ ಅವರು ಸ್ನೇಹಿತರ ಕುರಿತಾದ ಡೈಲಾಗ್ ಹೊಡೆದಿದ್ದನ್ನು ಕಂಡು ವೀಕ್ಷಕರು ಬೆರಗಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಘು ಅವರು ಗಿಲ್ಲಿಗೆ ಚೂರಿ ಚುಚ್ಚಿದ್ದು, ಕಟ್ಟಪ್ಪ ಬಾಹುಬಲಿಗೆ ಚೂರಿ ಚುಚ್ಚಿದ ವಿಡಿಯೋ ಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರಘು ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
💔#BBK12 #GilliNata #Gilli pic.twitter.com/8h08OeVpmX
— Raghav G M (@RaghavGm116882) December 1, 2025
Raghu Anna 😶🥲#BBK #BBK12 #Gilli #Raghu pic.twitter.com/smVUDyLcbY
— ಬಿಸಿಚಾ (@bisichaa) December 1, 2025
😅😬#BBK12 #GilliNata #Gilli pic.twitter.com/iSIwlrUNoX
— UrsMk (@UrsMk1133) December 1, 2025
Gilli never fails to pull comedy out of nowhere 😂#BBK12 #Gilli
— Manu (@yoitzmanu) December 1, 2025
pic.twitter.com/TD3Vrk2HlO
After seeing Gilli’s journey so far in #BBK12
— 🌿 Gear Brylls (@g_brylls) December 1, 2025
ಈ ಲೋಕವೆಲ್ಲ ಘೋರ…
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಸ್ವಾರ್ಥವೇ…
ನೆರಳನ್ನು ನೀಡುವಂತಹ ಮರವನ್ನೇ ಕಡಿವರೆಲ್ಲ (screenspace tagondu)…
ನಿಸ್ವಾರ್ಥ ಜೀವಿಗಳಿಗೆ ಜಗದೆ ಕಹಿಯೇ ಅಪಾರ.
But #Gilli – your truth is your strength, and that alone sets you apart.👑 pic.twitter.com/VI39TY4yfZ
Kattapa backstabbed/killed Bahubali on the orders/influence of the guest😂
— Virat👑Rocky✨️ (@Virat_Rocky18) December 1, 2025
Now the game has become intense but I think Gilli is taking this in a sportsmanlike way only.
That's where he stands differently from other contestants. #Gilli #BBK12 #BBKSeason12 pic.twitter.com/7XwP8IVZbV
ಇಷ್ಟೆಲ್ಲ ಚರ್ಚೆಗಳ ನಡುವೆ ಇಂದು ರಘು ಮತ್ತು ಗಿಲ್ಲಿ ನಿನ್ನೆ ನಡೆದ ಎಲ್ಲಾ ವಾಗ್ವಾದಗಳ ಮರೆತು ಜೊತೆಯಾಗಿ ತಮಾಷೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು Beauty of boys… ನಿನ್ನೆ ಕುರುಕ್ಷೇತ್ರ ಮಾಡಿ ಇವತ್ತು ಇಬ್ರು Flex ಮಾಡ್ತಾ ಇದಾರೆ…
ಅದೇ ಹೆಣ್ ಮಕ್ಳು ಯಾವತ್ತೋ ಯಾವ್ದೋ ಟಾಸ್ಕ್ ಅಲ್ಲಿ Dependent ಅಂದಳು ಅಂತ ಇವತ್ತಿಗೂ ಅದನ್ನ ಒಳ್ಳೆ Bubblegum ಥರ ಎಳೆದಾಡ್ತ ಇದಾರೆ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.
ಒಟ್ಟಾರೆ ಬಿಗ್ ಬಾಸ್ ಸೀಸನ್ 12 ಗಿಲ್ಲಿ ತಂಡದ ಚೇಸ್ಟೆಗಳಿಂದ ಮನೆ ಮಂದಿ ಒಟ್ಟಿಗೆ ಕೂತು ಶೋ ನೋಡುತ್ತಾ ನಕ್ಕುನಲಿಯುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಲ್ಲರ್ಸ್ ಕನ್ನಡ ಜಿಯೋ ಹಾಟ್ ಸ್ಟಾರ್ ವಿಡಿಯೋ, ಮತ್ತು ಬಾಹುಬಲಿ ಸಿನಿಮಾದ ವಿಡಿಯೋಗಳು ವೈರಲ್ ಆಗಿದೆ.
Beauty of boys…
— ಅಲ್ಪಸಂಖ್ಯಾತ (@alpasankhyata) December 2, 2025
ನಿನ್ನೆ ಕುರುಕ್ಷೇತ್ರ ಮಾಡಿ ಇವತ್ತು ಇಬ್ರು Flex 💪🏻 ಮಾಡ್ತಾ ಇದಾರೆ…
ಅದೇ ಹೆಣ್ ಮಕ್ಳು ಯಾವತ್ತೋ ಯಾವ್ದೋ ಟಾಸ್ಕ್ ಅಲ್ಲಿ Dependent ಅಂದಳು ಅಂತ ಇವತ್ತಿಗೂ ಅದನ್ನ ಒಳ್ಳೆ Bubblegum ಥರ ಎಳೆದಾಡ್ತ ಇದಾರೆ 🤦🏻♂️#BBK12#Gilli
pic.twitter.com/cDq2tb2MOU