
ದೊಡ್ಡಬಳ್ಳಾಪುರ: ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ಜಾಲ್ಗೊಂನ್ ನಲ್ಲಿ ನಡೆದ 5ನೇ ಫೆಡರೇಶನ್ ಕಪ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ (Kabbadi Championship) ಭಾಗವಹಿಸಿದ ಕರ್ನಾಟಕದ ಕಬ್ಬಡಿ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ.
ವಿಶೇಷವಾಗಿ ಕರ್ನಾಟಕ ತಂಡದಲ್ಲಿ ದೊಡ್ಡಬಳ್ಳಾಪುರದ ಅವಿಘ್ನ ಕಬ್ಬಡಿ ಕ್ಲಬ್ ನ ಹರೀಶ್ ಭಾಗಿಯಾಗಿದ್ದು, ತಾಲೂಕಿನ ಕೀರ್ತಿ ಹೆಚ್ಚಿಸಿದೆ.
ಅಮೆಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ವತಿಯಿಂದ ಮಹಾರಾಷ್ಟ್ರದ ಜಾಲ್ಲೋನ್ ನಲ್ಲಿ ಡಿ.12 ರಿಂದ 15ರವರೆಗೆ ನಡೆಸಲಾಯಿತು.
ನ್ಯಾಷನಲ್ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ವಿಜೇತರಾದ ಕರ್ನಾಟಕ ರಾಜ್ಯ ಕಬ್ಬಡಿ ತಂಡಕ್ಕೆ ಹಾಗೂ ದೊಡ್ಡಬಳ್ಳಾಪುರದ ಅವಿಘ್ನ ಕಬ್ಬಡಿ ಕ್ಲಬ್ ನ ಹರೀಶ್ ಅವರಿಗೆ ಮುಖಂಡರಾದ ನಾಗರಾಜ್ ಎಂ ಹಾಗೂ ಅವಿಘ್ನ ಕಬ್ಬಡಿ ತಂಡದ ತರಬೇತುದಾರ ರವಿಚಂದ್ರನ್ ಶುಭಕೋರಿದ್ದಾರೆ.