
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ (Ghati Subrahmanya Temple) ಇಂದು (ಶನಿವಾರ) ಹುಂಡಿ ಕಾಣಿಕೆ ಎಣಿಕೆ ಕಾರ್ಯ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಇಂದು ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ 60 ಲಕ್ಷ 97 ಸಾವಿರ 818ರೂ ಸಂಗ್ರಹವಾಗಿದೆ.
ಇದರೊಂದಿಗೆ 1 ಕೆಜಿ 30 ಗ್ರಾಂ ಬೆಳ್ಳಿ, 4 ಗ್ರಾಂ 10 ಮಿಲಿ ಬೆಳ್ಳಿಯನ್ನು ಭಕ್ತರು ಹುಂಡಿಗೆ ಅರ್ಪಿಸಿದ್ದಾರೆ.
ಇಂದು ಹುಂಡಿಯನ್ನು ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ಆಡಳಿತ ಮಂಡಲಿ, ಸಿಬ್ಬಂದಿ, ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.
ನ.3ರಂದು ನಡೆದ ಹುಂಡಿ ಕಾಣಿಕೆ ಎಣಿಕೆಯಲ್ಲಿ 62 ಲಕ್ಷ 63 ಸಾವಿರ 30ರೂ ಸಂಗ್ರಹವಾಗಿತ್ತು.