ಬೆಳಗಾವಿ: ಗೃಹಲಕ್ಷ್ಮಿ (Gruhalakshmi) ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಈ ಸೋಮವಾರ ದಿಂದ ಶನಿವಾರ ದೊಳಗೆ ಮಹಿಳೆ ಯರ ಖಾತೆಗೆ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ತಿಳಿಸಿದ್ದಾರೆ.
ಕಳೆದ ವಾರ ಸದನದಲ್ಲಿ ಪ್ರತಿಪಕ್ಷಗಳು, ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡಿಲ್ಲ ಎಂದು ಗದ್ದಲ ಎಬ್ಬಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು.
ಅದರ ಬೆನ್ನಲ್ಲೇ ಈಗ 24ನೇ ಕಂತಿನ ಹಣ ಬಿಡುಗಡೆಗೆ ಸಿದ್ಧತೆ ಜರುಗಿದೆ. ಮೃತಪಟ್ಟವರ ಖಾತೆಗಳಿಗೂ ಹಣ ಜಮಾ ಆಗುತ್ತಿದೆ ಎನ್ನುವ ಕುರಿತು ಉತ್ತರಿಸಿದ ಅವರು, ಅಂಥವರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದರು.
ಮೃತಪಟ್ಟವರ ಖಾತೆಗಳಿಗೂ 2000 ರೂ. ಜಮಾ ಆಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಸೂಕ್ತ ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತಿದೆ. ಒಂದು ವೇಳೆ ಮೃತಪಟ್ಟವರ ಖಾತೆಗೆ ಹಣ ಜಮಾ ಆಗಿದ್ದರೆ, ವಾಪಸ್ ಪಡೆಯುವಂತೆ ಬ್ಯಾಂಕ್‌ನವರಿಗೆ ಅಗತ್ಯ ಸೂಚನೆಗಳು ನೀಡಲಾಗಿದೆ ಎಂದು ವಿವರಿಸಿದರು.